ಮರಸಪ್ಪ ರವಿ ಸರ್ ಪ್ರಾಮಾಣಿಕತೆ, ಸರಳ-ಸಜ್ಜನಿಕೆಯ ವ್ಯಕ್ತಿತ್ವ ಮತ್ತು ಒಂದು ಗಟ್ಟಿಯಾದ ಸೈದ್ಧಾಂತಿಕ ನಿಲುವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ವಿಶಿಷ್ಟ ವ್ಯಕ್ತಿತ್ವ

ಮರಸಪ್ಪ್ ರವಿ ಸಾರ್

ಮರಸಪ್ಪ ರವಿ ಸರ್ ಇವರು ಮೂಲತಹ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಳಗಾಳ ಗ್ರಾಮದವರು. ಪ್ರಾಮಾಣಿಕತೆ, ಸರಳ-ಸಜ್ಜನಿಕೆಯ ವ್ಯಕ್ತಿತ್ವ ಮತ್ತು ಒಂದು ಗಟ್ಟಿಯಾದ ಸೈದ್ಧಾಂತಿಕ ನಿಲುವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ವಿಶಿಷ್ಟ ವ್ಯಕ್ತಿತ್ವ ಇವರದು.

ಮರ್ಸಪ್ಪ ರವಿ ಸರ್ ಅವರು ಎಂತಹ ಸಂದರ್ಭದಲ್ಲಿಯೂ ಕೂಡ ತಮ್ಮ ಗಟ್ಟಿಯಾದ ಸೈದ್ಧಾಂತಿಕ ನಿಲುವುಗಳನ್ನು ಬಿಟ್ಟುಕೊಟ್ಟಿಲ್ಲ. ತಮ್ಮಈ ಗಟ್ಟಿಯಾದ ಸೈದ್ಧಾಂತಿಕ ಬದ್ಧತೆಯಿಂದ ಇವರು ಹಲವಾರು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುವಂತಾದರೂ ಕೂಡ ಯಾವುದೇ ಕಾರಣಕ್ಕೂ ತಮ್ಮ ತನವನ್ನು ಬಿಟ್ಟುಕೊಟ್ಟಿಲ್ಲ. ಆಗೊಮ್ಮೆ ಮರಸಪ್ಪ ರವಿ ಸರ್ ಅವರು ಕೆಲವೊಂದು ವಿಚಾರಗಳಲ್ಲಿ ರಾಜಿಯಾಗಿದ್ದರೆ ಇವತ್ತು ಅವರ ಸ್ಥಾನಮಾನ ಆರ್ಥಿಕ ಸ್ಥಿತಿಗತಿಗಳೇ ಬದಲಾಗಿ ಹೋಗುತ್ತಿತ್ತು. ಏಕೆಂದರೆ ಇವರಿಂದ ಪರಿಚಯರಾದವರು, ಇವರಿಂದ ಸಿಪಾರಸ್ಸು ಪಡೆದು ಹೋದವರು ಇಂದು ಕೈಗೆಟುಕದ ಸ್ಥಾನಮಾನಗಳಲ್ಲಿ, ಅಧಿಕಾರಗಳಲ್ಲಿ ಆರ್ಥಿಕ ಸ್ಥಿತಿವಂತರಾಗಿ ವಿಜೃಂಬಿಸುತ್ತಿದ್ದಾರೆ.

ಮರಸಪ್ಪ ರವಿ ಸರ್ ಅವರನ್ನು ನಾನು ಸುಮಾರು 25 ವರ್ಷಗಳಿಂದ ನೋಡುತ್ತ ಬಂದಿದ್ದೇನೆ .ಏಕೆಂದರೆ ನನ್ನ ಕಾನನದ ಬದುಕು, ನಾಡಿನ ಬದುಕಿನತ್ತ ಸಾಗಿದ್ದೇ ,ಇವರಿಂದ. ನಾನು 2009 ರಿಂದಲೂ ನೋಡುತ್ತಾ ಇದ್ದೇನೆ,ಅದೇ ಶಿಸ್ತು, ಸರಳತೆ,ನೇರ ನಿಷ್ಠುರತೆಯ ಗಾಂಭೀರ್ಯತೆಯನ್ನು ಇಂದಿಗೂ ಬಿಟ್ಟು ಕೊಟ್ಟಿಲ್ಲ. ಪ್ರಸ್ತುತ ಸಮಾಜದಲ್ಲಿ ಯಾವುದೇ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಅವರ ಬಣ್ಣ-ಆಕಾರ, ಹಾಕಿರುವ ಬಟ್ಟೆ ಮತ್ತು ಆರ್ಥಿಕ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಧರಿಸುವುದುಂಟು ಮತ್ತು ಮಾತನಾಡಿಸುವುದನ್ನು ನಾವು ಸಹಜವಾಗಿ ಸಮಾಜದಲ್ಲಿ ಕಂಡಿರುತ್ತೇವೆ ಆದರೆ ಇವತ್ತಿನವರೆಗೂ ಕೂಡ ಯಾರನ್ನೇ ಮಾತಾಡಿಸುವಾಗ ಇವರ ಬಾಯಿಂದ “ಸರ್” ಎಂಬ ಪದ ಬಳಕೆಯಲ್ಲದೆ ಮಾತಾಡಿದ್ದನ್ನು ನಾ ಕಂಡೆ ಇಲ್ಲ. ಅವರ ವೃತ್ತಿ ಕಸ ಗುಡಿಸುವ ಕೆಲಸದಿಂದಿಡಿದು ಯಾವುದೇ ಉನ್ನತ ಹುದ್ದೆಯಲ್ಲಿರುವ ಯಾರನ್ನೇ ಆಗಲಿ ಸರ್ ಎಂದೇ ಮಾತಾಡಿಸುವುದು ಇವರ ವಿಶಿಷ್ಟ ವ್ಯಕ್ತಿತ್ವಕ್ಕೇ ಇಡಿದ ಕೈಗನ್ನಡಿ .

ಮರಸಪ್ಪ ರವಿ ಸರ್ ಅವರು ಬಹಳ ಕಷ್ಟಪಟ್ಟು ಅತ್ಯಂತ ತಳಹಂತದಿಂದ ಬೆಳೆದವರು, ಕಷ್ಟಪಟ್ಟು ದುಡಿದು ಸ್ಥಿತಿವಂತಿಕೆಯ ಹಲವಾರು ಏರಿಳಿತಗಳನ್ನು ಕಂಡಿದ್ದರು ಕೂಡ, ಒಂದೇ ತರಹದ ವ್ಯಕ್ತಿತ್ವವನ್ನು ರೂಪಿಸಿ ರೂಪಿಸಿಕೊಂಡು ನಿರೂಪಿಸುತ್ತಾ ಬರುತ್ತಿರುವವರು. ಶಿಕ್ಷಣ ಸೀಮಿತವಿದ್ದರು, ಇವರಿಗೆ ಜೀವನದ ಅನುಭವ, ಯಾವ ದರ್ಶನಿಕನಿಗೂ ಕಡಿಮೆ ಇಲ್ಲದಂತೆ ಪಕ್ವವಾಗಿದೆ. ಮಾತುಗಾರಿಕೆ, ಚತುರತೆ, ಸಮಾಜದ ಸೂಕ್ಷ್ಮ ಸ್ಥರಗಳನ್ನು ಅರ್ಥೈಸಿಕೊಳ್ಳುವಿಕೆ ಮತ್ತು ನಿರಂತರವಾಗಿ ಚಲಿಸುತ್ತಿರುವ ಸಮಾಜದ ಜೊತೆ ಜೊತೆಗೆ ತಮ್ಮನ್ನು ತಾವು ತೆರೆದುಕೊಳ್ಳುವ ವಿಶಾಲತೆ ಇವರಲ್ಲಿ ಅಗಾಧವಾಗಿದೆ. ಕೇವಲ ಪುಸ್ತಕ ಸಿದ್ಧಾಂತ ಮತ್ತೊಬ್ಬರ ಜೀವನ ಅನುಭವಗಳಿಂದ ರಚಿತವಾದ ಕೃತಿ ಕಾದಂಬರಿಗಳಿಂದ ಮನುಷ್ಯ ತನ್ನನ್ನು ತಾನು ರೂಡಿಸಿಕೊಳ್ಳುವುದೇ ಹೆಚ್ಚು , ಆದರೆ ತಾವು ಹುಟ್ಟಿ ಬೆಳೆದ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿನ ಸಕಲೆಂಟು ಜೀವರಾಶಿಗಳ ಚಲನವಲನಗಳ ಸೂಕ್ಷ್ಮ ಸಂವೇದನೆಗಳನ್ನು ಹಾಗು ಅವುಗಳ ಬದುಕಿನ ಆತಂಕಗಳ ತಲ್ಲಣಗಳೊಂದಿಗಿನ ಹಸಿವು ದುಃಖ ದುಮ್ಮಾನಗಳನ್ನು ಅರಿತವರಿಗೆ ಮಾತ್ರ ಈ ಸಮಾಜ ಸರಿಯಾಗಿ ಅರ್ಥವಾಗುತ್ತದೆ ಅಂತಹ ಜ್ಞಾನಕ್ಕೆ ಮರಸಪ್ಪ ರವಿ ಸರ್ ಅವರಲ್ಲಿ ಯಾವುದೇ ಕಡಿಮೆ ಇಲ್ಲ.

ಆದ್ದರಿಂದಲೇ ಇವತ್ತಿಗೂ ಕೂಡ, ಇವರು ಒಬ್ಬ ಪರಿಸರ ಪ್ರೇಮಿಯಾಗಿ, ಪಕ್ಷಿ ಪ್ರೇಮಿಯಾಗಿ, ಮನುಷ್ಯ ಮತ್ತು ಮನುಷ್ಯತ್ವದ ಪ್ರೇಮಿಯಾಗಿ ನಮ್ಮೆಲ್ಲರ ಮಧ್ಯೆ , ಎಲ್ಲರೊಳಗೊಬ್ಬರಾಗಿ ಬದುಕುತ್ತಿದ್ದಾರೆ. ಇಂತಹ ವಿಶಿಷ್ಟ ವ್ಯಕ್ತಿತ್ವದ ಸಾಮಾಜಿಕ ಕಳಕಳಿಯುಳ್ಳ ಪಕ್ಷಿ ಪ್ರೇಮಿ ಪರಿಸರ ಪ್ರೇಮಿ ಮನುಷ್ಯ ಮತ್ತು ಮಾನವ ಪ್ರೇಮಿಯಾದ ಮರಸಪ್ಪ ರವಿ ಸರ್ ಅವರು ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ . ಇವರಿಗೆ ಸಮಸ್ತ ಆದಿವಾಸಿಗಳ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.
ಕೊನೆಯದಾಗಿ ಹೇಳುವುದಾದರೆ ಮರಸಪ್ಪ ಸರ್ ಅವರ ಬದುಕು ಒಬ್ಬ ವ್ಯಕ್ತಿಯ ಬದುಕಿನ ಸಾರ್ಥಕತೆಯ ಮಾದರಿ ಹೇಗಿರುತ್ತದೆ ಎಂದರೆ, ಎಂದು ಅದು ಮರಸಪ್ಪ ರವಿ ಸರ್ ಬದುಕಿ ಬಾಳುತ್ತಿರುವ

ಹಾಕಿ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು; 32 ವರ್ಷಗಳ ಗೆಲುವಿನ ಬರ ಮುಂದುವರಿಕೆ     |     ಭಾರತದ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ: ಆಪರೇಷನ್ ಸಿಂಧೂರ್ ಕುರಿತು ಅಜಿತ್ ದೋವಲ್     |     ಬೆಂಗಳೂರಿನಲ್ಲಿ ಬೆಳಗಿನ ಜಾವ ಮಹಿಳೆ ಮೇಲೆ ದಾಳಿ; ಚಿನ್ನದ ಸರ ಕಿತ್ತು ಪರಾರಿ     |     ಧ್ವಜಾರೋಹಣದಿಂದ ವಿನಾಯಿತಿ ಕೋರಿದ ಜಮೀರ್; ವಿಜಯನಗರಕ್ಕೆ ಬಸವಂತಪ್ಪ, ಉಡುಪಿಗೆ ರಿಜ್ವಾನ್ ಅರ್ಷದ್     |     ಕಾವೇರಿ ವಿವಾದ: ಸರ್ಕಾರ ವಿಫಲ ಎಂದು ಕುಮಾರಸ್ವಾಮಿ ಆರೋಪ; ಡಿಕೆಶಿ ವಿರುದ್ಧ ವಾಗ್ದಾಳಿ     |     ಖರ್ಗೆ ಭಾಷಣದ ಬಳಿಕ ರಾಮಲೀಲಾ ವೇದಿಕೆ ‘ಶುದ್ಧೀಕರಣ’: ಉತ್ತರಾಖಂಡದಲ್ಲಿ ರಾಜಕೀಯ ಕಿಡಿ     |     ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮತ್ತೆ ಗದ್ದಲ: ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಆಕ್ರೋಶ, ಸಂಸತ್‌ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ     |     ಮುಂಬೈನಲ್ಲಿ 33 ವರ್ಷದ ನಟಿಗೆ ಲೈಂಗಿಕ ದೌರ್ಜನ್ಯ ಆರೋಪ: 73 ವರ್ಷದ ಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ     |     ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें