ಕರ್ನಾಟಕ ರಾಜ್ಯ ಕಾಡು ಕಾಡಂಚಿ ಅರಣ್ಯಾಧಾರಿತ ಆದಿವಾಸಿ ಒಕ್ಕೂಟದೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಭೆ
ಆದಿವಾಸಿ ಮುಖಂಡರಾದ ಮುತ್ತಯ್ಯ ವಿಟ್ಟಲ್ ನಾಣಚಿ, ಮಹೇಶ್ ಗೀತಾ ಸಿದ್ಧಿ ಹಾಗೂ ಜಯಪ್ಪ ಮುಂತಾದ ಪ್ರಮುಖರ ಮುಖಂಡರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಸ್ ಸಭೆ
ಇಂದು ತಾರೀಕು : 14-07-2026 ರ ಮಂಗಳವಾರ ವಿಧಾನ ಸೌಧದಲ್ಲಿ ( ಕೊಠಡಿ ಸಂಖ್ಯೆ,320 ) ಮಾನ್ಯ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಅವರು ಅರಣ್ಯಾಧಾರಿತ ಮೂಲ ಆದಿವಾಸಿ ಸಂಘಟನೆಗಳ ಒಕ್ಕೂಟ pvtg ಹಾಗೂ Forest Dwellers 12 ಆದಿವಾಸಿ ಸಮುದಾಯಗಳ ಕುಂದುಕೊರತೆಗಳನ್ನು ಆಲಿಸಿ ಮನವಿ ಮನವಿ ಸ್ವೀಕರಿಸಿ ಅಧಿಕಾರಿಗಳಿಗೆ ಅಗತ್ಯ ಆದೇಶಗಳನ್ನು ನೀಡಿದರು.
1. ಸರಕಾರಿ ಸಿವಿಲ್ ಸೇವೆಗೆ ನೇರ ನೇಮಕಾತಿ :-
ಈ ವಿಷಯ ವರ್ಷದಿಂದ ನೆನೆಗುದಿಗೆ ಬಿದ್ದಿದ್ದು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ one time oppointment ಮಾಡುವ ನಿಯಮ ಅಂತಿಮಗೊಳಿಸಿ ಮುಂದಿನ ಸಚಿವ ಸಂಪುಟ ಸಭೆಗೆ ಕಡತ ಮಂಡಿಸಿ ಅನುಮೋದನೆ ಪಡೆಯುವುದಾಗಿ ತಿಳಿಸಿದರು.
2. ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ:-
K A A ನಿಗಮವನ್ನು ರಚನಾತ್ಮಕವಾಗಿ ಸ್ಥಾಪನೆ ಮಾಡಲು ಕ್ರಮಕೈಗೊಳ್ಳಲಾಗುವುದು . ಸದರಿ ವಿಷಯವನ್ನು ಸಹ ಸಚಿವ ಸಂಪುಟ ಸಭೆಗೆ ಕಡತ ಮಂಡಿಸಿ ಅನುಮೋದನೆ ಪಡೆಯುವುದಾಗಿ ಹೇಳಿದರು.
3. ಉಚಿತ ವಿಶೇಷ ಪೌಷ್ಟಿಕ ಆಹಾರ ವಿತರಣೆ :-
ಕಳೆದ ಮೂರು ತಿಂಗಳಿಂದ ಆಡಳಿತಾತ್ಮಕ ಕಾರಣದಿಂದ ಸ್ಥಗಿತಗೊಂಡಿತ್ತು . ಎಲ್ಲಾ ಅಡೆತಡೆಗಳನ್ನು ನಿವಾರಿಸಿ ತಕ್ಷಣ ಆಹಾರ ಪೂರೈಕೆ ಮಾಡಲು ಕ್ರಮ ಕೈಗೊಳ್ಳಲು ಹಾಜರಿದ್ದ ಪರಿಶಿಷ್ಠ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದರು.
4. ಮೂಲ ಸೌಕರ್ಯ ರಸ್ತೆ, ಕುಡಿಯುವ ನೀರು, ವಿದ್ಯುತ್, ವಸತಿ, ಶಿಕ್ಷಣ, ಆರೋಗ್ಯ, ಮುಂತಾದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ನಿಗಧಿ ಮಾಡಲಾಗಿದ್ದ 200 ಕೋಟಿ ಅನುದಾನದ ಉಪಯೋಗದ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ವಸತಿ ನಿರ್ಮಾಣ ಕಾರ್ಯವನ್ನು ಅನುಷ್ಠಾನ ಮಾಡಲು ನಿರ್ದೇಶನ ನೀಡಿದರು.
5. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ :-
ಸುಪ್ರೀಂ ಕೋರ್ಟು ಆದೇಶದ ಅನ್ವಯ ಈಗಾಗಲೇ ಆದಿವಾಸಿಗಳು ಸಲ್ಲಿಸಿರುವ ವೈಯಕ್ತಿಕ ಭೂಮಿ ಹಕ್ಕು ಕ್ಲೈಮುಗಳನ್ನು ಮರು ಪರಿಶೀಲನೆ ಮಾಡಿ ಹಕ್ಕು ನೀಡಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮ ಸಭೆಗಳಿಗೆ ಸ್ಥಳೀಯ ಅರಣ್ಯ ಅಧಿಕಾರಿಗಳು ಖಡ್ಡಾಯವಾಗಿ ಹಾಜರಾಗಲು ಸುತ್ತೋಲೆ ಹೊರಡಿಸಲು ಆದೇಶ ನೀಡಿದರು. FRA, ಕಲಂ 3/ 1(m) ಸೆಕ್ಷನ್ ಪ್ರಕಾರ ವಿವಾದಿತ ಭೂಮಿಗೆ ವೈಯಕ್ತಿಕ ಭೂಮಿ ಹಕ್ಕು ಪಡೆಯಲು ಕನಿಷ್ಟ ಸಾಕ್ಷ್ಯಾಧಾರಗಳನ್ನು ನೀಡಿದ್ದರು ಮಾನ್ಯ ಮಾಡಿ ಹಕ್ಕು ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಅರಣ್ಯ ಇಲಾಖೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.
6. ಡಾ. ಮುಜಾಫರ್ ಆಸಾದಿ ನೇತೃತ್ವದ ಹೈ ಕೋರ್ಟ್ ಕಮಿಟಿ 2014 ರಲ್ಲಿ ಸರಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸುಗಳ ಅನ್ವಯ 3418 ಕುಟುಂಬಗಳಿಗೆ ಹಣಕಾಸಿನ ಪ್ಯಾಕೇಜ್ ನೀಡುವ ಬದಲು ಭೂಮಿ ನೀಡಲು ಮನವಿ ಮಾಡಲಾಗಿದೆ. ಪುನರ್ವಸತಿ ಕಲ್ಪಿಸಲು ಅಗತ್ಯ ಭೂಮಿಗಳನ್ನು ಹಾಡಿ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುತಿಸಿ ಪುನರ್ವಸತಿ ಗೊಳಿಸುವ ಕಾರ್ಯ ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಲು ಅರಣ್ಯ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
7. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ನಿರ್ದೇಶಕರ ನೇಮಕ:-
KSTRI ಅನ್ನು ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿನ ಮಾದರಿಯಲ್ಲಿ ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸಬೇಕು. TRI ನಲ್ಲಿ ಸ್ಥಾಪಿಸಿರುವ ಮೂಲ ಆದಿವಾಸಿ ಅಧ್ಯಯನ ಕೇಂದ್ರ ದ ವೃಂದ ಬಲ ನೇಮಕಾತಿ (C &R ) ಮಾಡುವುದು ಹಾಗೂ ವಸ್ತು ಸಂಗ್ರಹಾಲಯ ಸ್ಥಾಪನೆ ವಿಷಯದಲ್ಲಿ
ಮಾನ್ಯ C S ಅವರ ಗಮನ ಸೆಳೆಯಲಾಗಿದೆ.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಪರಿಶಿಷ್ಠ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರು, ಜಂಟಿ ನಿರ್ದೇಶಕರು, ಆದಿವಾಸಿ ಸಮುದಾಯದ ಮುತ್ತಯ್ಯ ವಿ (ಸೋಲಿಗ) ,ವಿಠಲ್ B S, ಹಾಗೂ ಮಹೇಶ್ (ಬೆಟ್ಟ ಕುರುಬ), ಡಾ.ಗೀತಾ ಸಿದ್ದಿ (ಸಿದ್ದಿ) ಹಾಜರಿದ್ದರು.

