ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ತನ್ನ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳನ್ನು ಇದೀಗ ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಫೋಟೋಶೂಟ್, ಕಾರ್ಪೊರೇಟ್ ಈವೆಂಟ್ ಹಾಗೂ ಖಾಸಗಿ ಸಮಾರಂಭಗಳಿಗೆ ಬಾಡಿಗೆಗೆ ನೀಡಲು ನಿರ್ಧರಿಸಿದೆ.

ಈ ಬಸ್‌ಗಳು ಬೆಂಗಳೂರಿನ 26 ಪ್ರಮುಖ ಪ್ರವಾಸಿ ತಾಣಗಳ ನಡುವೆ ಸಂಚರಿಸುವುದರ ಜೊತೆಗೆ ಸಂಭ್ರಮಾಚರಣೆಗೆ ವಿಶಿಷ್ಟ ಅನುಭವ ನೀಡಲಿವೆ.

ಬಾಡಿಗೆ ವಿವರ

  • ಇಡೀ ದಿನ (Mon–Fri): ₹32,000
  • ಇಡೀ ದಿನ (Sat–Sun): ₹40,000

 ಗಂಟೆಗಳ ಕಾರ್ಯಕ್ರಮ:

  • ವಾರದ ದಿನಗಳು: ₹26,000 + GST
  • ವಾರಾಂತ್ಯ: ₹28,000 + GST

 ಗಂಟೆಗಳ ಫೋಟೋಶೂಟ್:

  • ವಾರದ ದಿನಗಳು: ₹12,000 + GST
  • ವಾರಾಂತ್ಯ: ₹16,000 + GST

ನಿಗದಿತ ಅವಧಿ ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.

ಕೆಎಸ್‌ಟಿಡಿಸಿ ಪ್ರಕಾರ, ಜನವರಿಯಿಂದ ಆರಂಭವಾದ ಈ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಈಗಾಗಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬಳಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹೊಸ ಯೋಜನೆಯ ಮೂಲಕ ಬೆಂಗಳೂರಿನಲ್ಲಿ ಆಚರಣೆಗಳಿಗೆ ವಿಭಿನ್ನ ಅನುಭವ ನೀಡುವ ಉದ್ದೇಶ ಹೊಂದಲಾಗಿದೆ.

ಹಾಕಿ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು; 32 ವರ್ಷಗಳ ಗೆಲುವಿನ ಬರ ಮುಂದುವರಿಕೆ     |     ಭಾರತದ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ: ಆಪರೇಷನ್ ಸಿಂಧೂರ್ ಕುರಿತು ಅಜಿತ್ ದೋವಲ್     |     ಬೆಂಗಳೂರಿನಲ್ಲಿ ಬೆಳಗಿನ ಜಾವ ಮಹಿಳೆ ಮೇಲೆ ದಾಳಿ; ಚಿನ್ನದ ಸರ ಕಿತ್ತು ಪರಾರಿ     |     ಧ್ವಜಾರೋಹಣದಿಂದ ವಿನಾಯಿತಿ ಕೋರಿದ ಜಮೀರ್; ವಿಜಯನಗರಕ್ಕೆ ಬಸವಂತಪ್ಪ, ಉಡುಪಿಗೆ ರಿಜ್ವಾನ್ ಅರ್ಷದ್     |     ಕಾವೇರಿ ವಿವಾದ: ಸರ್ಕಾರ ವಿಫಲ ಎಂದು ಕುಮಾರಸ್ವಾಮಿ ಆರೋಪ; ಡಿಕೆಶಿ ವಿರುದ್ಧ ವಾಗ್ದಾಳಿ     |     ಖರ್ಗೆ ಭಾಷಣದ ಬಳಿಕ ರಾಮಲೀಲಾ ವೇದಿಕೆ ‘ಶುದ್ಧೀಕರಣ’: ಉತ್ತರಾಖಂಡದಲ್ಲಿ ರಾಜಕೀಯ ಕಿಡಿ     |     ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮತ್ತೆ ಗದ್ದಲ: ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಆಕ್ರೋಶ, ಸಂಸತ್‌ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ     |     ಮುಂಬೈನಲ್ಲಿ 33 ವರ್ಷದ ನಟಿಗೆ ಲೈಂಗಿಕ ದೌರ್ಜನ್ಯ ಆರೋಪ: 73 ವರ್ಷದ ಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ     |     ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें