ಡಾ.M B ಹಡಪದ ಅವರಿಗೆ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರಶಸ್ತಿ

ಕರ್ನಾಟಕ ರತ್ನ ಪವರ ಸ್ಟಾರ್ ಪುನೀತ್ ರಾಜ್ ಕುಮಾರ್ ಪ್ರಶಸ್ತಿ – ಡಾ, ಎಮ್.ಬಿ ಹಡಪದ ಸುಗೂರ.ಎನ್ ಅವರಿಗೆ ಲಭಿಸಿದೆ.
‌ ‌ ಕಲಬುರಗಿ ಮಾ.17 ಬೆಂಗಳೂರು ನಗರದ ಯಲಹಂಕದಲ್ಲಿಗೌರವ ಸಮರ್ಪಣೆ ಸಂದರ್ಭ ಸಾಧಕರಿಗೆ ನೀಡುವ ಪ್ರಶಸ್ತಿ ಮತ್ತು ಗೌರವಗಳು ಅವರ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಹಾಗಾಗಿ ಎಲೆ ಮರೆ ಕಾಯಿಯಂತೆ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಗೌರವಿಸುವುದು ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಯಾಗುತ್ತದೆ ಎಂದು ಶ್ರೀ ಆನಂದ ಗುರುಜೀ ಜ್ಯೋತಿಷ್ಯರು ಹೇಳಿದರು.

ನಗರದ ಡಾ‌, ಬಿ.ಆರ್ ಅಂಬೇಡ್ಕರ್ ಸಭಾ ಭವನದಲ್ಲಿ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ರಾಜ್ಯ ‍ಮಟ್ಟದ ಕರ್ನಾಟಕ ರತ್ನ ಪವರ ಸ್ಟಾರ್ ದಿ/ ಡಾ, ಪುನೀತ್ ರಾಜಕುಮಾರ ಪ್ರಶಸ್ತಿ ಪ್ರದಾನ ಮಾಡುವುದರ ಮೂಲಕ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಪ್ರಶಸ್ತಿಗಳ ಬೆನ್ನತ್ತಿ ಹೋಗುವವರೇ ಹೆಚ್ಚು.ಆದರೆ ಹಲವು ಮಂದಿ ಹತ್ತಾರು ವರ್ಷಗಳಿಂದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಯಾವುದೇ ಪ್ರಶಸ್ತಿ ಮತ್ತು ಸನ್ಮಾನಕ್ಕೆ ಒಳಗಾಗದೇ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೆಲಸದಲ್ಲಿ ನಿರತರಾಗಿರುವವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರಿಂದ ಮತ್ತಷ್ಟು ಸಮಾಜ ಮುಖಿ ಕೆಲಸಗಳು ನಡೆಯುವಂತೆ ನೋಡಿ ಕೊಳ್ಳುತ್ತಿರುವ ಈ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಕಾರ್ಯ ಶ್ಲಾಘನೀಯ.

ಇದನ್ನೂ ಓದಿ

ಈ ಹಿಂದೆ ಈ ಟ್ರಸ್ಟ್‌ ರಾಜ್ಯದಲ್ಲಿ ಉತ್ತಮ ದಕ್ಷ. ಪ್ರಾಮಾಣಿಕತೆ ಎಂದು ಹೆಸರು ಪಡೆದಿರುವ ಕರ್ನಾಟಕ ಪ್ರಪ್ರಥಮ ಅಘೋರಿ ಮಹಿಳೆ ಶ್ರೀ ಭೈರವಿ ಅಮ್ಮ ಅವರಿಗೂ ಪವರ ಸ್ಟಾರ್ ಡಾ, ಪುನೀತ್ ರಾಜಕುಮಾರ್ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಬಾರಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ (ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಸಮಾಜದ ಸೇವಾ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಒಟ್ಟು ೧೮೫೦ ಕ್ಕೂ ಹೆಚ್ಚು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿ ಉತ್ತಮ ಸಾಧನೆ ಮಾಡಿರುವ ಶ್ರೀ ಡಾ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅವರು ಪ್ರಶಸ್ತಿ ಮೌಲ್ಯ ಹೆಚ್ಚಿಸಿದೆ ಅಲ್ಲದೆ ಈ ಗೌರವ ಸಲ್ಲಿಸುತ್ತಿರುವುದು ಅವರ ಸಾಧನೆಗೆ ಸಂದ ಗೌರವವಾಗಿದೆ.
ಈ ನಿಟ್ಟಿನಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಬೆಳಕಿಗೆ ತರುತ್ತಿರುವ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ, ಸಾಯಿ ಸತೀಶ್ ತೋಟಯ್ಯ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಎಂದು ಡಾ, ಎಮ್.ಬಿ ಹಡಪದ ಸುಗೂರ ಎನ್ ಅವರು ಹರ್ಷ ವ್ಯಕ್ತಪಡಿಸಿದರು. ‌
ಒಬ್ಬ ವ್ಯಕ್ತಿ ಸಮಾಜದಲ್ಲಿ ಸುಂದರವಾಗಿ ಕಾಣಲು ಹಡಪದ ಸಮಾಜದವರ ಕಲೆ ಮತ್ತು ಶ್ರಮ ಅತೀ ಮುಖ್ಯವಾಗಿದೆ ಎಂದು ಹೇಳಿದರು. ಸಮಾಜದ ಸೇವೆಯಲ್ಲಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ರಾಜ್ಯ ಮಟ್ಟದ ಕರ್ನಾಟಕ ರತ್ನ “ಪವರ ಸ್ಟಾರ್ ದಿ‌/ ಡಾ‌, ಪುನೀತ್ ರಾಜ್‍ಕುಮಾರ್ ಅವರ ಹೆಸರಿನ ಪ್ರಶಸ್ತಿ ಈ ನಿಸ್ವಾರ್ಥ ಸಮಾಜ ಮುಖಿ ಕಾರ್ಯಗಳನ್ನು ಮಾಡುವ ಮೂಲಕ ಇದೇ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ನಿಸ್ವಾರ್ಥ ಸಮಾಜದ ಸೇವಕ ಡಾ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಪ್ರಶಸ್ತಿ ನೆನಪಿನ ಕಾಣಿಕೆ ಶಾಲು ಹಾರ‌. ಪುಸ್ತಕ ಹಾಗೂ ಕರ್ನಾಟಕ ರತ್ನ ಪವರ್ ಸ್ಟಾರ್ ದಿ/ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರ ಇರುವ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಶ್ರೀ ಶಿರಡಿ ಸಾಯಿ ದೀಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಮತ್ತು ಚಲನ ಚಿತ್ರ ನಿರ್ಮಾಪಕರಾದ ಶ್ರೀ ಡಾ, ಸಾಯಿ ಸತೀಶ್ ತೋಟಯ್ಯ ಸರ ಅವರು ಆಯೋಜನೆ ಮಾಡಿದ ಕಾರ್ಯಕ್ರಮ ಇಂದು ಬೆಂಗಳೂರು ನಗರದ ಯಲಹಂಕದಲ್ಲಿ ಇರುವ ಡಾ, ಬಿ.ಆರ್ ಅಂಬೇಡ್ಕರ್ ಸಭಾ ‌ಭವನದಲ್ಲಿ ಬಹಳ ಅದ್ಧೂರಿಯಾಗಿ ಕಾರ್ಯಕ್ರಮ ಜರುಗಿತ್ತು. ವಿವಿಧ ಕ್ಷೇತ್ರದ ಸಾಧನೆ ಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನ ಮಾಡಿದರು.
ಇದೇ ಸಂಧರ್ಭದಲ್ಲಿ ಪೂಜ್ಯರಾದ ಡಾ, ಶ್ರೀ ಶ್ರೀ ಆನಂದ ಗುರುಜೀ ಜ್ಯೋತಿಷ್ಯರು, ಕರ್ನಾಟಕ ಮೊದಲ ಮಹಿಳಾ ಡಾ, ಅಘೋರಿ ಭೈರವಿ ಅಮ್ಮನವರು, ಹಾಗೂ ಡಾ, ಅಂಜನಪ್ಪ, ವೀಣಾ ಸುಂದರ ಚಲನ ಚಿತ್ರ ನಟಿ. ಡಾಗ್‌ ಸತೀಶ್ ಬಿಗ್ ಬಾಸ್ ನಟರು. ಪ್ರಥಮ ಬಿಗ್ ಬಾಸ್ ನಟ. ಧ್ರುವಂತ್ ಕಿರು ತೆರೆಯ ಚಲನ ಚಿತ್ರ ಮತ್ತು ಬಿಗ್ ಬಾಸ್ ಖ್ಯಾತ ನಟ ನಟಿಯರಾದ ಜಾನವಿ.ಗೋಲ್ಡ್ ಸುರೇಶ್, ಅರ್ಚನಾ. ಸಹನಾ ಗೌಡ. ಶ್ರೇಯಾ ಪಾವನಿ.
ಈ ಎಲ್ಲಾ ಕಿರು ತೆರೆಯ ನಟರು ವೇದಿಕೆಯ ಎದುರು ಗಡೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ನೋಡುವ ಮೂಲಕ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತ್ತು.

ಈ ಸಮಯದಲ್ಲಿ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮತ್ತು ಸಮಾಜದ ಸೇವಕರಾದ ಡಾ, ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು‌.

ಈ ಪ್ರಶಸ್ತಿ ನಮ್ಮ ಸಮಾಜ ಮುಖಿ ಕಾರ್ಯಗಳನ್ನು ಗುರುತಿಸಿ ಸಾವಿರಾರು ಮಕ್ಕಳಿಗೆ, ಅಂಧರಿಗೆ. ನಿರ್ಗತಿಕರಿಗೆ ‌ಪೌರ ಕಾರ್ಮಿಕರಿಗೆ. ಅಂಗವಿಕಲರಿಗೆ .(ವಿಕಲ ಚೇತನರಿಗೆ) ಕಟ್ಟಡ ಕಾರ್ಮಿಕರಿಗೆ. ಸಾಧು-ಸಂತರಿಗೆ. ಬುದ್ದಿ ಮಾಧ್ಯರಿಗೆ. ಹಿರಿಯ ನಿರ್ಗತಿಕರಿಗೆ. ಅನಾಥ ಶಾಲಾ ಮಕ್ಕಳಿಗೆ. ಸೇರಿದಂತೆ ಒಟ್ಟಾರೆ ಹೇಳುವುದಾದರೆ ೧೮೫೦ ಕ್ಕೂ ಹೆಚ್ಚು ಅನಾಥರಿಗೆ ಪ್ರೀಯಾಗಿ ಕ್ಷೌರ ಸೇವೆ ಸಲ್ಲಿಸಿ ಈ ರೀತಿಯ ಅನೇಕ ರಾಜ್ಯ ಮತ್ತು ರಾಷ್ಟ್ರೀಯ ಹಾಗೂ ಅಂತರಾಷ್ಟೀಯ ಪ್ರಶಸ್ತಿ ಪಡೆದರು ಎಂದು ತಿಳಿಸಲಾಗಿದೆ. ಈ ಪ್ರಶಸ್ತಿ ಸಿಕ್ಕ ಸಲುವಾಗಿ ನಮ್ಮನ್ನು ಈ ಸಮಾಜದ ವತಿಯಿಂದ ಗುರುತಿಸಿ ಪ್ರಶಸ್ತಿ ನೀಡಿದಕ್ಕಾಗಿ ತಮ್ಮ ಸಂಸ್ಥೆಗೆ ಹೃತ್ಪೂರ್ವಕವಾಗಿ ಅನಂತ ದನ್ಯವಾದಗಳು ಎಂದು ವರದಿಯಾಗಿದೆ.

Praktyczne_strategie_w_świecie_hazardu_online_z_nv_casino_dla_początkujących     |     Aktualne_bonusy_i_promocje_w_smokace_casino_przyciągają_wielu_graczy_online     |     Aktuelle_Diskussionen_rund_um_smokace_erfahrungen_und_innovative_Alternativen_im     |     Lemon Casino – Kasyno Online Oficjalna Strona.350     |     Gama Casino Online – официальный сайт – вход и зеркало.3515     |     Mostbet AZ – bukmeker ve kazino Mostbet Giri rsmi sayt.11903 (2)     |     Казино – Официальный сайт Pin Up Casino Входи и играй.3377     |     Vox Casino Online dowiadczenie uytkownika i funkcjonalno.2811 (2)     |     Pin Up – Azrbaycann n yax kazinosu Rsmi sayt.5697 (2)     |     Pin Up Casino Onlayn Azrbaycan.6770     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें