ಐಟಮ್ ಸಾಂಗಲ್ಲಿ ಹೆಣ್ಣೇ ಐಟಮ್ಮು…

ಐಟಮ್ ಸಾಂಗಲ್ಲಿ ಹೆಣ್ಣೇ ಐಟಮ್ಮು…

ದೃಶ್ಯದಲ್ಲಿ ಬರಹದಲ್ಲಿ ಸೆಕ್ಸು ಕ್ರೈಮ್ ನ್ನು ಮಾರುಕಟ್ಟೆ ಮಾಡಬಹುದು ಅಂತ ಬಹಳ ಹಿಂದೆಯೇ ಅನೇಕರು ಕನ್ನಡದಲ್ಲಿ ತೋರಿಸಿದ್ದಾರೆ. ಬ್ಲಾಕ್ ಟ್ಯಾಬ್ಲೆಡ್ ಪೇಪರ್ ಇದನ್ನು ದೊಡ್ಡಮಟ್ಟದಲ್ಲಿ ಮುನ್ನಲೆಗೆ ತಂದಿತು. ಕನ್ನಡ ಜನಪ್ರಿಯ ಸಿನೆಮಾಕ್ಕೆ ‘ಹೆಣ್ಣು’ ಗಂಡು ಚಪ್ಪರಿಸುವ ಉಪ್ಪಿನಕಾಯಿಯಂತಲೇ ಭಾವಿಸಿದೆ. ಐಟಮ್ ಸಾಂಗ್ ನಲ್ಲಿ ಹೆಣ್ಣೇ ಐಟಮ್ಮು. ಹೆಣ್ಣನ್ನು ಎಣ್ಣೆಯನ್ನು ನಶೆಯ ಜತೆ ಬೆರೆಸಿಯೇ ನೋಡುವುದನ್ನು ಸಿನೆಮಾ ನೋಡುಗರಿಗೆ ಅಭ್ಯಾಸ ಮಾಡಿಸಿದೆ. ಬಹುಪಾಲು ನೋಡುಗ ವರ್ಗ ಇದನ್ನು ನಿರೀಕ್ಷಿಸುತ್ತದೆ. ಹಿಂದೆ ಹೆಣ್ಣನ್ನು ಗಂಡಿನ ಅಧೀನ ಎಂದು ಕೀಳಾಗಿ ನೋಡುವ ಬಹಳ ಐಟಮ್ ಸಾಂಗ್ ಗಳು ಹಿಟ್ಟಾಗಿವೆ. ಡಬಲ್ ಮೀನಿಂಗ್ ನಲ್ಲಿ ಹತ್ತಾರು ಲೈಂಗಿಕ ಉಪಮೆ ರೂಪಕ ಬಳಸಿ ಗೆದ್ದಿದ್ದಾರೆ. ಗಂಡಸರು ಗೆಲ್ಲಿಸಿದ್ದಾರೆ. ಈಚೆಗೆ ಯೋಗರಾಜ ಭಟ್ಟರು ಉತ್ತರ ಕರ್ನಾಟಕದ ಜನಪದ ಎಂದು ಪಾಪುಲರ್ ಸಾಂಗ್ ಬಳಸಿ ‘ಹಿತ್ತಲಕ್ಕೆ ಕರಿಬೇಡ ಮಾವ..’ ತರಹದ ಹಾಡನ್ನು ಹಾಡಿಸಿದ್ದರು. ಇಂತಹ ಗಂಡಹಮಿಕೆಯ ಅಭಿರುಚಿಯನ್ನು ಪ್ರೇಮ್ ತುಟ್ಟತುದಿಗೆ ಒಯ್ದಿದ್ದಾರೆ. ಪ್ರೇಮ್ ಬರೆದಿರೋ ಸರ್ಸೆ ಸರ್ಸೆ ಸಾಂಗ್ ಇರೋ ಬರೋ ಲಿಮಿಟ್ಸ್ ಕ್ರಾಸ್ ಮಾಡಿ ‘ಅಕ್ಷರ’ ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ. ಇದು ಐಟಮ್ ಸಾಂಗಿನ Extreem ಎಂಡ್ ಅನ್ನಿಸುತ್ತೆ. ಬಹುಶಃ ಹುಚ್ಚೆದ್ದು ಉಪ್ಪಿನ ಕಾಯಿ ತರ ಬಾಯ್ ಚಪ್ಪರಿಸಿ ಕೇಳ್ತಾರೆ ಅಂತಾನೆ ಪ್ರೇಮ್ ಭಾವಿಸಿರಬೇಕು. ತೀರಾ ಈಚೆಗೆ ಯಶ್ ಅಭಿನಯದ Toxic ಸಿನೆಮಾದ ಟೀಜರ್ ಕೂಡ ಪ್ರೇಮ್ ಬರೆದ ಹಾಡಿನ ದೃಶ್ಯರೂಪದಂತಿದೆ. ಇದೂ ಕೂಡ ಪ್ರೇಮ್ ಅವರನ್ನು ಪ್ರಭಾವಿಸಿರಬೇಕು.

ಎಲ್ಲಾ ಕಾಲವೂ ಒಂದೇ ತರ ಇರಲ್ಲ. ಹೆಣ್ಣು ಎಚ್ಚೆತ್ತ ಕಾಲವಿದು. ತನ್ನನ್ನು ಸರಕು ಮಾಡಿಕೊಂಡದ್ದನ್ನು ಗಟ್ಟಿಯಾಗಿ ವಿರೋಧಿಸುವ ಕಾಲವಿದು. ಬಹುಶಃ ಈ ಹಾಡಿಗೆ ಹೆಣ್ಣು ಮಕ್ಕಳಿಂದಲೇ ಹೆಚ್ಚು ಪ್ರತಿರೋದ ಬಂದದ್ದು. ಗಂಡಸರು ಇದನ್ನು ವಿರೋಧಿಸಿ ಬರೆದರಾದರೂ ಅವರೊಳಗಿನ ‘ಗಂಡು’ ಮೇಲರಿಮೆ ಈ ಹಾಡನ್ನು ಎರಡೆರಡು ಬಾರಿ ಕೇಳಿಸಿಕೊಂಡು ಇಮೇಜನ್ನು ಕಲ್ಪಿಸಿಕೊಂಡಿರಲಿಕ್ಕೆ ಸಾಕು. ಈ ಹಾಡು ಗಂಡಿನೊಳಗಿನ ಗಂಡಹಮಿಕೆಯ ತಲೆ ಸವರುತ್ತೆ. ಗಂಡಿನೊಳಗಿನ ಗಂಡಹಮಿಕೆಯನ್ನು ಸಂತೃಪ್ತಿಗೊಳಿಸಲೆಂದೇ ಕೋಟ್ಯಾಂತರ ರೂಪಾಯಿ ವ್ಯವಹಾರ ಕುದುರಿಸುವ ದೊಡ್ಡ ಮಾರುಕಟ್ಟೆ ಇದೆ. ಇಂತಹ ಮಾರುಕಟ್ಟೆಯನ್ನು ತಿರುಮುರುಗು ಮಾಡದ ಹೊರತು ಹೀಗೆ ಹೆಣ್ಣನ್ನು ಸರಕಾಗಿ ಮಾರುವುದು ನಿಲ್ಲುವುದಿಲ್ಲ.

ನನ್ನ ಪ್ರಕಾರ ಈ ಹಾಡು ಸಾಂಕೇತಿಕ ಅಷ್ಟೇ. ಸಿನೆಮಾದ ಪ್ರತಿಯೊಂದು ವಿಭಾಗವೂ ಪುರುಷಪಾರಮ್ಯದಿಂದಲೇ Construct ಆಗಿದೆ. ಹಾಗಾಗಿ ಈ ಹಾಡಿನ ಜತೆ ಕನ್ನಡ ಸಿನೆಮಾದ ಗಂಡಾಳ್ವಿಕೆಯ ಎಲ್ಲಾ ಗುರುತುಗಳನ್ನೂ ನಿಧಾನಕ್ಕಾದರೂ ವಿರೋಧಿಸಬೇಕಿದೆ. ಇಂತಹ ವಿರೋಧದ ಜತೆಗೆ ಗಂಡುಗಳು ತಮ್ಮೊಳಗಿನ ಗಂಡಹಮಿಕೆಯನ್ನು ಚೂರು ಚೂರೇ ಕಡಿಮೆ ಮಾಡಿಕೊಂಡರೆ ಒಳ್ಳೆಯದು.

ಇದು ಎಂತಹ ಕೆಟ್ಟ ಕಾಲ ಎಂದರೆ ಈ ವಿವಾದ ಕೂಡ ಸಿನೆಮಾಕ್ಕೆ ದೊಡ್ಡ ಪಬ್ಲಿಸಿಟಿ ತಂದುಕೊಡ್ತು ಅಂತ ಪಾರ್ಟಿ ಮಾಡಿ ಎಂಜಾಯ್ ಮಾಡೋ ತರಹದ್ದು..

ಹಾಕಿ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು; 32 ವರ್ಷಗಳ ಗೆಲುವಿನ ಬರ ಮುಂದುವರಿಕೆ     |     ಭಾರತದ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ: ಆಪರೇಷನ್ ಸಿಂಧೂರ್ ಕುರಿತು ಅಜಿತ್ ದೋವಲ್     |     ಬೆಂಗಳೂರಿನಲ್ಲಿ ಬೆಳಗಿನ ಜಾವ ಮಹಿಳೆ ಮೇಲೆ ದಾಳಿ; ಚಿನ್ನದ ಸರ ಕಿತ್ತು ಪರಾರಿ     |     ಧ್ವಜಾರೋಹಣದಿಂದ ವಿನಾಯಿತಿ ಕೋರಿದ ಜಮೀರ್; ವಿಜಯನಗರಕ್ಕೆ ಬಸವಂತಪ್ಪ, ಉಡುಪಿಗೆ ರಿಜ್ವಾನ್ ಅರ್ಷದ್     |     ಕಾವೇರಿ ವಿವಾದ: ಸರ್ಕಾರ ವಿಫಲ ಎಂದು ಕುಮಾರಸ್ವಾಮಿ ಆರೋಪ; ಡಿಕೆಶಿ ವಿರುದ್ಧ ವಾಗ್ದಾಳಿ     |     ಖರ್ಗೆ ಭಾಷಣದ ಬಳಿಕ ರಾಮಲೀಲಾ ವೇದಿಕೆ ‘ಶುದ್ಧೀಕರಣ’: ಉತ್ತರಾಖಂಡದಲ್ಲಿ ರಾಜಕೀಯ ಕಿಡಿ     |     ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮತ್ತೆ ಗದ್ದಲ: ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಆಕ್ರೋಶ, ಸಂಸತ್‌ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ     |     ಮುಂಬೈನಲ್ಲಿ 33 ವರ್ಷದ ನಟಿಗೆ ಲೈಂಗಿಕ ದೌರ್ಜನ್ಯ ಆರೋಪ: 73 ವರ್ಷದ ಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ     |     ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें