2025 26ನೇ ಬಜೆಟ್ ಘೋಷಣೆಗಳನ್ನು ಜಾರಿಗೊಳಿಸಲು ಅರಣ್ಯಧಾರಿತ ಆದಿವಾಸಿ ಒಕ್ಕೂಟದ ಒತ್ತಾಯ ರಾಜ್ಯಾದ್ಯಂತ 25ನೇ ತಾರೀಕು ಹೋರಾಟಕ್ಕೆ ಕರೆ

ರಾಜ್ಯಾದ್ಯಂತ ಮೂಲ ಆದಿವಾಸಿಗಳ ಹೋರಾಟಕ್ಕೆ ಸಭೆ ತೀರ್ಮಾನ

ದಿನಾಂಕ: 09-05-2026 ರಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ, Centre entre of Adivasi Health- Institute of Public Health ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅರಣ್ಯಾಧಾರಿತ ಮೂಲ ಆದಿವಾಸಿ ಸಂಘಟನೆಗಳ ಒಕ್ಕೂಟದ ಮುಖಂಡರ ಸಭೆ ಏರ್ಪಡಿಸಲಾಗಿತ್ತು.

 

>  ಸಭೆಯ ಅಧ್ಯಕ್ಷತೆಯನ್ನು ಹಸಲರ ಸಮುದಾಯದ ಹಿರಿಯ ಮುಖಂಡರಾದ ರಾಮಣ್ಣ ವಹಿಸಿದ್ದರು.

 

>ಒಕ್ಕೂಟದ ಸಂಯೋಜಕರಾದ ಮುತ್ತಯ್ಯ ವಿ ಸಭೆಗೆ ಹಾಜರಾದ ವಿವಿಧ ಜಿಲ್ಲೆಗಳ ವಿವಿಧ ಆದಿವಾಸಿ ಸಮುದಾಯಗಳ ಮುಖಂಡರನ್ನು ಸ್ವಾಗಸಿದರು. ಮುಖಂಡರು ತಮ್ಮ (ಹೆಸರು, ಸಮುದಾಯ,ಊರು, ಜಿಲ್ಲೆಯ) ಸ್ವ ಪರಿಚಯ ಮಾಡಿಕೊಂಡರು.

 

>2026 ಜನವರಿ,5 ರಂದು ನಡೆದ ಸಭೆಯ ವರದಿ ಮಂಡಿಸಲಾಯಿತು.

 

>ಸರ್ಕಾರಿ ಸಿವಿಲ್ ಸೇವೆಗೆ ನೇರ ನೇಮಕ :-

2025-26 ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಪ್ರಸ್ತಾಪಿಸಿರುವ ರಾಜ್ಯ ಸರ್ಕಾರಿ ಸಿವಿಲ್ ಸೇವೆಗೆ ನೇರ ನೇಮಕ ವಿಚಾರದ ಬಗ್ಗೆ ದೀರ್ಘವಾಗಿ ಚರ್ಚಿಸಲಾಯಿತು.

•ಸರಕಾರದ ವಿಶೇಷ ನೇಮಕಾತಿಗಳ ಆದೇಶ,ಸುತ್ತೋಲೆಗಳ ದಾಖಲಾತಿಗಳನ್ನು ಸಂಗ್ರಹಿಸಿ ಕರಡು ನಿಯಮ ರೂಪಿಸಲು ಡಾ.ಕೃಷ್ಣಮೂರ್ತಿ ನೇತೃತ್ವದಲ್ಲಿ  ಡಾ. ಮಾದೇಗೌಡ, ಅರುಣ್ ಕುಮಾರ್, ಡಾ. ಗಣೇಶ, ವಿಠಲ್ ನಾಣಚ್ಚಿ, ರಾಮಣ್ಣ, ನಿರಂಜನ್, ಗೋಪಾಲ್, ಲಕ್ಷ್ಮಿ,ಸಿದ್ದಪ್ಪ, ಪುಷ್ಪಜ, ಜಯಪ್ಪ, ಸೇರಿದಂತೆ ತಾತ್ಕಾಲಿಕ ಸಮಿತಿ ರಚಿಸಲಾಯಿತು.(ಮಾಹಿತಿ ಕಲೆ ಹಾಕುವ ಜವಾಬ್ದಾರಿ:

ತಮಿಳು ನಾಡು – ಅರುಣ್ ಕುಮಾರ್, ಕೇರಳ – ಡಾ. ಗಣೇಶ, ಕರ್ನಾಟಕ – ಡಾ . ಮಾದೇಗೌಡ)

•ಸಿವಿಲ್ ಸೇವೆಗೆ ನೇರ ನೇಮಕ ಮಾಡಲು  ಸಮುದಾಯವಾರು ಅರ್ಹ ನಿರುದ್ಯೋಗಿ ವಿದ್ಯಾವಂತರ ಮಾಹಿತಿಯುಳ್ಳ ಪಟ್ಟಿಯ ಜೊತೆ ಮನವಿ ತಯಾರಿ ಮಾಡುವುದು

•2026 ಮೇ,25 ರಂದು ಎಲ್ಲಾ ಸಂಘಟನೆಗಳು ಒಟ್ಟು ಸೇರಿ 11 ಜಿಲ್ಲೆಗಳಲ್ಲೂ ಶಿಕ್ಷಣ, ಆರೋಗ್ಯ,ಉದ್ಯೋಗ, ಭೂಮಿ ಹಕ್ಕು ಮೂಲಭೂತ ಸೌಕರ್ಯ ಮತ್ತು ಜೀವನಾಧಾರಗಳ ಅಭಿವೃದ್ಧಿಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಪ್ರತಿಭಟನಾ ಸಮಾವೇಶ ನಡೆಸುವುದು

•2026 ಜೂನ್ 11 ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶ ನಡೆಸುವುದು.

 

> ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ :-

• ರಾಜ್ಯ ಸರ್ಕಾರ 2026-27 ನೇ ಸಾಲಿನ ಆಯವ್ಯಯ ಘೋಷಣೆಯಲ್ಲಿ ಪ್ರಸ್ತಾಪಿಸಿರುವ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬಂಧ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದು

• ಸಾಮಾಜಿಕ – ಆರ್ಥಿಕ ಅಭಿವೃದ್ಧಿ ವಿನೂತನ ಮಾದರಿ ಸೇರಿದಂತೆ ಕರಡು ಬೈಲಾ ರಚನೆ ಮಾಡುವುದು.

 

• ರಾಜ್ಯದ 119 ಬುಡಕಟ್ಟು ಆಶ್ರಮ ಶಾಲೆ ಗಳಿಗೆ ಮಹಿಳಾ Care Teker ನೇಮಕ ಮಾಡಲು ಅನುಸರಿಸಬೇಕಾದ ಕ್ರಮಗಳ ಕುರಿತು ಸರಕಾರಕ್ಕೆ ಪತ್ರ ಬರೆಯುವುದು.

 

>ಆದಿವಾಸಿ ಸುಸ್ಥಿರ ಅಭಿವೃದ್ಧಿ ನೀತಿ :-

ಆದಿವಾಸಿ ಸಮುದಾಯದ ಸಂಸ್ಕೃತಿ, ನೆಲ, ನೀರು, ಭೂಮಿ, ಕಿರು ಅರಣ್ಯ ಸಂಪನ್ಮೂಲಗಳ ಮೇಲಿನ ಹಕ್ಕುಗಳು, ಬುಡಕಟ್ಟು ಉಪ ಯೋಜನೆ ಅನುದಾನಗಳು ಸೇರಿದಂತೆ ಸುಸ್ಥಿರ ಅಭಿವೃದ್ಧಿ ಆಧಾರಿತ ಯೋಜನೆ ರೂಪಿಸುವುದು.ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ, ತಳ ಸಮುದಾಯ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹಕಾರ ಪಡೆದು ಆದಿವಾಸಿ ಅಭಿವೃದ್ಧಿ ನೀತಿ ನಿರೂಪಣೆ ಮಾಡುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತು ಡಾ. ಚಂದ್ರಶೇಖರ್ RV ಅವರು ಮಾಹಿತಿ ನೀಡಿದರು.

 

> S T ಒಳ ಮೀಸಲಾತಿ :-

S T ಒಳ ಮೀಸಲಾತಿ ನೀಡುವಂತೆ ಒತ್ತಾಯಿಸುವುದರ ಜೊತೆ 12  ಅರಣ್ಯಾಧಾರಿತ ಮೂಲ ಆದಿವಾಸಿ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಲು ಒತ್ತಾಯಿಸುವುದು.

 

>ಆರೋಗ್ಯ ಹಕ್ಕಿನ ಕಾಯಿದೆ :-

ಕರ್ನಾಟಕ ರಾಜ್ಯ ಸರ್ಕಾರ ಆರೋಗ್ಯ ಹಕ್ಕಿನ ಕಾಯಿದೆ ಕರಡು ರಚಿಸಲು ಮುಂದಾಗಿದೆ. ಈ ಕಾಯಿದೆಯಲ್ಲಿ ಆದಿವಾಸಿ ಆರೋಗ್ಯ chapter ಇರುವಂತೆ ನೋಡಿಕೊಳ್ಳಲು ಪೂರ್ವ ತಯಾರಿ ಮಾಡುವುದು.

•ರಾಜ್ಯದ 5 ಜಿಲ್ಲೆಗಳಲ್ಲಿ ಚಾಲನೆಯಲ್ಲಿರುವ ಟ್ರೈಬಲ್ ಹೆಲ್ತ್ ನ್ಯಾವಿಗೇಟರ್ ಕಾರ್ಯಕ್ರಮದ ಅನುಷ್ಠಾನದ ಕುರಿತು ಮಾಹಿತಿ ನೀಡಲಾಯಿತು.ನ್ಯಾವಿಗೇಟರ್ ಆಯ್ಕೆ ಮತ್ತು ಯೋಜನೆ ಕುರಿತು ಓರಿಯೆಂಟೇಷನ್ ಕಾರ್ಯಕ್ರಮ ನಡೆಸುವುದು . ಈ ಕಾರ್ಯಕ್ರಮವನ್ನು ಆದಿವಾಸಿ ಸಮುದಾಯ ವಾಸವಿರುವ ಇತರ ಜಿಲ್ಲೆಗಳಿಗೆ ವಿಸ್ತರಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದು.

 

>ಭೂ ಸಮಸ್ಯೆಗಳ ಪರಿಹಾರ:-

ಕಂದಾಯ ಇಲಾಖೆ ಮೂಲಕ ಆದಿವಾಸಿಗಳಿಗೆ ಮಂಜೂರಾಗಿರುವ  ಕಂದಾಯ ಭೂಮಿ ಸ್ವಾಧೀನದಲ್ಲಿದ್ದರೂ ದಾಖಲಾತಿ ಇಲ್ಲ ಮತ್ತು ಕಂದಾಯ ದಾಖಲೆ ಹೊಂದಿರುವ ಆದಿವಾಸಿಗಳ  ಭೂಮಿಯನ್ನು ಇತರರು ಅಕ್ರಮ ಒತ್ತುವರಿ ಮಾಡಿದ್ದಾರೆ.ರಾಜ್ಯದಾದ್ಯಂತ ಕಂದಾಯ ಭೂಮಿ ಸಮಸ್ಯೆಗಳ ಮಾಹಿತಿ ಸಂಗ್ರಹಿಸಿ ಪರಿಹಾರಕ್ಕೆ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಳ್ಳಲಾಯಿತು.

 

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಣ್ಣ ಅವರ ಮಾತಿನೊಂದಿಗೆ ಸಭೆ ಮುಕ್ತಾಯ ಗೊಂಡಿತು.ಪುಷ್ಪಜ, ಕೊಡಗು ಇವರು ಸಭೆಯ ನಿರೂಪಣೆ ಮಾಡಿದರು.

ಹಾಕಿ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು; 32 ವರ್ಷಗಳ ಗೆಲುವಿನ ಬರ ಮುಂದುವರಿಕೆ     |     ಭಾರತದ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ: ಆಪರೇಷನ್ ಸಿಂಧೂರ್ ಕುರಿತು ಅಜಿತ್ ದೋವಲ್     |     ಬೆಂಗಳೂರಿನಲ್ಲಿ ಬೆಳಗಿನ ಜಾವ ಮಹಿಳೆ ಮೇಲೆ ದಾಳಿ; ಚಿನ್ನದ ಸರ ಕಿತ್ತು ಪರಾರಿ     |     ಧ್ವಜಾರೋಹಣದಿಂದ ವಿನಾಯಿತಿ ಕೋರಿದ ಜಮೀರ್; ವಿಜಯನಗರಕ್ಕೆ ಬಸವಂತಪ್ಪ, ಉಡುಪಿಗೆ ರಿಜ್ವಾನ್ ಅರ್ಷದ್     |     ಕಾವೇರಿ ವಿವಾದ: ಸರ್ಕಾರ ವಿಫಲ ಎಂದು ಕುಮಾರಸ್ವಾಮಿ ಆರೋಪ; ಡಿಕೆಶಿ ವಿರುದ್ಧ ವಾಗ್ದಾಳಿ     |     ಖರ್ಗೆ ಭಾಷಣದ ಬಳಿಕ ರಾಮಲೀಲಾ ವೇದಿಕೆ ‘ಶುದ್ಧೀಕರಣ’: ಉತ್ತರಾಖಂಡದಲ್ಲಿ ರಾಜಕೀಯ ಕಿಡಿ     |     ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮತ್ತೆ ಗದ್ದಲ: ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಆಕ್ರೋಶ, ಸಂಸತ್‌ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ     |     ಮುಂಬೈನಲ್ಲಿ 33 ವರ್ಷದ ನಟಿಗೆ ಲೈಂಗಿಕ ದೌರ್ಜನ್ಯ ಆರೋಪ: 73 ವರ್ಷದ ಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ     |     ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें