ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮರಾದ ದಿನ- ಶಿವಸುಂದರ್

*ಭಗತ್ ಸಿಂಗ್ ಮತ್ತು ಬಾಂಬು*

ಸುಳ್ಳಿನ ಸಂಸತ್ತಿನಲ್ಲಿ

ಭಗತ್ ಸಿಂಗನ ಬಾಂಬು ಸ್ಪೋಟಿಸಲಿ..

ಸೋಗಲಾಡಿ ಪ್ರತಿಮೆಗಳನ್ನು ಉಡಾಯಿಸಲಿ

ಪ್ರತಿಮನದ ಪಡಸಾಲೆಯಲ್ಲಿ..

ಆತ್ಮೀಯರೇ..

ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮರಾದ ದಿನ.

ಇಂದು ನಾಸ್ತಿಕ ಸೆಕ್ಯುಲಾರ್ ಸಮಾಜವಾದಿ ಕ್ರಾಂತಿಕಾರಿ ಭಗತ್ ಸಿಂಗ್ ಹುತಾತ್ಮ ದಿನ

ಸದಾ ಬಡಜನರ ಧರ್ಮಾತೀತ ಸೌಹಾರ್ದತೆಯನ್ನು ಪ್ರತಿಪಾದಿಸುತ್ತಿದ್ದ

*ಭಗತ್ ಸಿಂಗ್ ಹಾಕುತ್ತಿದ್ದ ಘೋಷಣೆ ವಂದೇ ಮಾತರಂ ಅಲ್ಲ*.

 

*ಇಂಕ್ವಿಲಾಬ್ ಜಿಂದಾಬಾದ್*.

*ಹಾಡುತ್ತಿದ್ದ ಹಾಡು ವಂದೇ ಮಾತರಂ ಅಲ್ಲ.*

*ಸರ್ಫಾರೋಷಿಕಿ ತಮನ್ನಾ ..*

ಆದರೆ ತಮ್ಮ ಪಿತಾಮಹ ಸಾವರ್ಕರ್ ರೀತಿ ಭಾರತವನ್ನು ಅಮೇರಿಕಾದ ಗುಲಾಮಿಗೆ ಸಿಲುಕಿಸಿರುವ ಹಿಂದೂತ್ವವಾದಿ ಪ್ರಧಾನಿ ಮೋದಿ ಭಗತ್ ಸಿಂಗ್ ನೆನಪಿನ ದಿನವಾದ ಇಂದು ಆತನ ಹೆಸರನ್ನು….

*ತಮ್ಮ ಕೋಮುವಾದಿ ಮುಸ್ಲಿಂ ದ್ವೇಷಿ ವಂದೇ ಮಾತರಂ ಯೋಜನೆ ಬಳಸಿಕೊಳ್ಳುತ್ತಿರುವುದನ್ನು ನಿಜವಾದ ದೇಶಪ್ರೇಮಿಗಳೆಲ್ಲರೂ ವಿರೋಧಿಸಲೇ ಬೇಕು.*

*ಭಗತ್ ಸಿಂಗ್ ಯಾರು?*

ಭಗತ್ ಸಿಂಗ್ ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಮಾತ್ರವಲ್ಲದೆ ಸ್ಥಳೀಯ ಬಂಡವಾಳಶಾಹಿ ಮತ್ತು ಪುರೋಹಿತಶಾಹಿಗಳ ವಿರುದ್ಧವೂ ಸಮರ ಸಾರಿದ್ದ ಕ್ರಾಂತಿಕಾರಿ.

*ಸ್ವಘೋಷಿತ ವೀರ ಸಾವರ್ಕರ್ ತರವಲ್ಲದೆ ತಾನು ಮಾಡಿದ ಕ್ರಾಂತಿಕಾರಿ ಚಟುವಟಿಕೆಗಳ ಹೊಣೆಗಾರಿಕೆಯನ್ನು ತಾನೇ ಹೊತ್ತುಕೊಂದರು. ಸೆರೆಯಲ್ಲಿದ್ದಾಗ ಸಾವರ್ಕರ್ ತರ ಬ್ರಿಟಿಷರಿಗೆ ಸಂಪೂರ್ಣ ಶರಣಾಗಾತಿ ಪಾತ್ರ ಬರೆಯದೆ ನಗುನಗುತಾ ನೇಣಿಗೇರಿ ನೈಜ ಸ್ವಾತಂತ್ರ್ಯದ ಸ್ಪೂರ್ತಿಯಾಗಿದ್ದರು*.

*ಭಗತ್ ಸಿಂಗ್ ಎಂದರೆ ಏನು?*

ವ್ಯಕ್ತಿಯ ಹೆಸರೇನು ?

ಗತಿಸಿದ ಕಾಲವೇನು?

ಭಗತ್ ಸಿಂಗ್ ಎಂದರೆ..

ಪ್ರತಿಯುಗದ ಪ್ರತಿಮನದ

ಪ್ರತಿಕ್ಷಣದ ಕ್ರಾಂತಿಯ ಗಳಿಗೆ..

ಭಗತ್ ಸಿಂಗ್ ಎಂದರೆ..

ಬಿಳಿ ಸುಳ್ಳುಗಳು ಸೃಷ್ಟಿಸುವ

ಬೂದು ಮೌನವನ್ನು

ಬಾಂಬಿನ ಸದ್ದಿನಿಂದ

ಬೇಧಿಸಿದ ಕಡು ಸತ್ಯದ ಕ್ಷಣ .

ಭಗತ್ ಸಿಂಗ್ ಎಂದರೆ..

ಸಂಧಾನ ಸಂಭ್ರಮವನ್ನು

ಕ್ರಾಂತಿಘೋಷಣೆಯು

ಬಯಲು ಮಾಡಿದ ಗಳಿಗೆ ..

ಭಗತ್ ಸಿಂಗ್ ಎಂದರೆ

ಸಿಂಗರಿಸಿದ ಸುಳ್ಳುಗಳ ವಿರುದ್ಧ

ನಿಶಸ್ತ್ರ ಸತ್ಯಗಳ

ನಿರಂತರ ಸಮರ ..

ಇದೋ ಈಗ

ಇತಿಹಾಸ ಸುತ್ತು ಸುತ್ತಿ

ಮತ್ತೆ ಮರಳಿದೆ….

ಕರಿಬಿಳಿಯ ಕಲಬೆರಕೆಯ

ಮಬ್ಬುಗತ್ತಲ ವಂಚನೆಗೆ..

ಸೂರ್ಯೋದಯವೆಂದು ಹೆಸರಿಡಲಾಗಿದೆ…!

ಕಾವಿಲ್ಲದ ಬೆಳಕಿಂದ

ಮತ್ತೆ

ಕತ್ತಲು ಹೆಪ್ಪುಗಟ್ಟುತ್ತಿದೆ…

ಭಗತ್ ಸಿಂಗನ ಗಳಿಗೆ

ಮತ್ತೆ ಮರಳಿದೆ..

ಸುಳ್ಳಿನ ಸಂಸತ್ತಿನಲ್ಲಿ

ಸತ್ಯ ಸ್ಪೋಟಿಸಬೇಕಿದೆ ..

ಬಣ್ಣ ಬಣ್ಣಗಳ ಬೆಚ್ಚಗಿನ

ಕಂಫರ್ಟ್ ಜೋನುಗಳಲ್ಲಿ

ತುಸುವಾದರೂ

ಚಡಪಡಿಕೆ ಹುಟ್ಟಬೇಕಿದೆ ..

ಪ್ರತಿಮನದ ಮೌನ ಸ್ಮಶಾನದಲ್ಲಿ

ಭಗತ್ ಸಿಂಗನ ಬಾಂಬು ಸ್ಪೋಟಿಸಿ

ಸತ್ಯ ಮಾತಾಡಬೇಕಿದೆ ..

ಭಗತ್ ಸಿಂಗನ ಗಳಿಗೆ

ಮತ್ತೆ ಮರಳಿದೆ

 

-ಶಿವಸುಂದರ್

ಹಾಕಿ ವಿಶ್ವಕಪ್ 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು; 32 ವರ್ಷಗಳ ಗೆಲುವಿನ ಬರ ಮುಂದುವರಿಕೆ     |     ಭಾರತದ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಬೇಡಿ: ಆಪರೇಷನ್ ಸಿಂಧೂರ್ ಕುರಿತು ಅಜಿತ್ ದೋವಲ್     |     ಬೆಂಗಳೂರಿನಲ್ಲಿ ಬೆಳಗಿನ ಜಾವ ಮಹಿಳೆ ಮೇಲೆ ದಾಳಿ; ಚಿನ್ನದ ಸರ ಕಿತ್ತು ಪರಾರಿ     |     ಧ್ವಜಾರೋಹಣದಿಂದ ವಿನಾಯಿತಿ ಕೋರಿದ ಜಮೀರ್; ವಿಜಯನಗರಕ್ಕೆ ಬಸವಂತಪ್ಪ, ಉಡುಪಿಗೆ ರಿಜ್ವಾನ್ ಅರ್ಷದ್     |     ಕಾವೇರಿ ವಿವಾದ: ಸರ್ಕಾರ ವಿಫಲ ಎಂದು ಕುಮಾರಸ್ವಾಮಿ ಆರೋಪ; ಡಿಕೆಶಿ ವಿರುದ್ಧ ವಾಗ್ದಾಳಿ     |     ಖರ್ಗೆ ಭಾಷಣದ ಬಳಿಕ ರಾಮಲೀಲಾ ವೇದಿಕೆ ‘ಶುದ್ಧೀಕರಣ’: ಉತ್ತರಾಖಂಡದಲ್ಲಿ ರಾಜಕೀಯ ಕಿಡಿ     |     ಸಂಸತ್‌ ಮುಂಗಾರು ಅಧಿವೇಶನದಲ್ಲಿ ಮತ್ತೆ ಗದ್ದಲ: ರಾಹುಲ್‌ ಗಾಂಧಿ ವಿರುದ್ಧ ಎನ್‌ಡಿಎ ಆಕ್ರೋಶ, ಸಂಸತ್‌ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ     |     ಮುಂಬೈನಲ್ಲಿ 33 ವರ್ಷದ ನಟಿಗೆ ಲೈಂಗಿಕ ದೌರ್ಜನ್ಯ ಆರೋಪ: 73 ವರ್ಷದ ಚಿತ್ರ ನಿರ್ದೇಶಕ ಶಕೀಲ್ ನೂರಾನಿ ಬಂಧನ     |     ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें