ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ತನ್ನ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್‌ಗಳನ್ನು ಇದೀಗ ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಫೋಟೋಶೂಟ್, ಕಾರ್ಪೊರೇಟ್ ಈವೆಂಟ್ ಹಾಗೂ ಖಾಸಗಿ ಸಮಾರಂಭಗಳಿಗೆ ಬಾಡಿಗೆಗೆ ನೀಡಲು ನಿರ್ಧರಿಸಿದೆ.
ಈ ಬಸ್‌ಗಳು ಬೆಂಗಳೂರಿನ 26 ಪ್ರಮುಖ ಪ್ರವಾಸಿ ತಾಣಗಳ ನಡುವೆ ಸಂಚರಿಸುವುದರ ಜೊತೆಗೆ ಸಂಭ್ರಮಾಚರಣೆಗೆ ವಿಶಿಷ್ಟ ಅನುಭವ ನೀಡಲಿವೆ.
ಬಾಡಿಗೆ ವಿವರ
- ಇಡೀ ದಿನ (Mon–Fri): ₹32,000
- ಇಡೀ ದಿನ (Sat–Sun): ₹40,000
ಗಂಟೆಗಳ ಕಾರ್ಯಕ್ರಮ:
- ವಾರದ ದಿನಗಳು: ₹26,000 + GST
- ವಾರಾಂತ್ಯ: ₹28,000 + GST
ಗಂಟೆಗಳ ಫೋಟೋಶೂಟ್:
- ವಾರದ ದಿನಗಳು: ₹12,000 + GST
- ವಾರಾಂತ್ಯ: ₹16,000 + GST
ನಿಗದಿತ ಅವಧಿ ಮೀರಿದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ.
ಕೆಎಸ್‌ಟಿಡಿಸಿ ಪ್ರಕಾರ, ಜನವರಿಯಿಂದ ಆರಂಭವಾದ ಈ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಈಗಾಗಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಬಳಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹೊಸ ಯೋಜನೆಯ ಮೂಲಕ ಬೆಂಗಳೂರಿನಲ್ಲಿ ಆಚರಣೆಗಳಿಗೆ ವಿಭಿನ್ನ ಅನುಭವ ನೀಡುವ ಉದ್ದೇಶ ಹೊಂದಲಾಗಿದೆ.
