ಹಾರ್ಮುಜ್ ಜಲಸಂಧಿ ವಿವಾದ ತೀವ್ರ: ಅಮೆರಿಕ ಹೇಳಿಕೆಗೆ ಇರಾನ್ ತಿರುಗೇಟು – ‘ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವಿಲ್ಲ’

ತೆಹ್ರಾನ್/ವಾಷಿಂಗ್ಟನ್: ವಿಶ್ವದ ತೈಲ ಸಾಗಣೆಗೆ ಅತ್ಯಂತ ಮಹತ್ವದ ಸಮುದ್ರ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದೆ. ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಯಾವುದೇ ದೇಶದ ಅನುಮತಿ ಅಗತ್ಯವಿಲ್ಲ ಎಂಬ ಅಮೆರಿಕದ ಹೇಳಿಕೆಯನ್ನು ಇರಾನ್ ತೀವ್ರವಾಗಿ ತಳ್ಳಿಹಾಕಿದೆ.

ಅಮೆರಿಕದ ಅಧಿಕಾರಿಯೊಬ್ಬರು ಅಂತರರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಮಾಹಿತಿಯಂತೆ, ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಯಾವುದೇ ದೇಶದ ಅನುಮತಿ, ಎನ್‌ಒಸಿ ಅಥವಾ ಶುಲ್ಕದ ಅವಶ್ಯಕತೆ ಇಲ್ಲ. ಈ ಜಲಮಾರ್ಗದ ಮೇಲೆ ಯಾವುದೇ ಒಂದು ರಾಷ್ಟ್ರಕ್ಕೆ ಸಂಪೂರ್ಣ ನಿಯಂತ್ರಣವಿಲ್ಲದ ಕಾರಣ, ಹಡಗುಗಳ ಸಂಚಾರವನ್ನು ನಿರ್ಬಂಧಿಸುವ ಅಧಿಕಾರವೂ ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.

ಆದರೆ, ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ನ ಪರಮೋಚ್ಚ ನಾಯಕನ ಹಿರಿಯ ಸೇನಾ ಸಲಹೆಗಾರ ಮೊಹ್ಸೆನ್ ರೆಜಾಯಿ, “ಇರಾನ್‌ನ ಅನುಮೋದನೆ ಇಲ್ಲದೆ ಯಾವುದೇ ಹೊಸ ಸಾಗಣೆ ಮಾರ್ಗವನ್ನು ನಾವು ಒಪ್ಪುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ಸರ್ಕಾರಿ ಮಾಧ್ಯಮದ ವರದಿ ಪ್ರಕಾರ, ಅಮೆರಿಕ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಉಲ್ಲಂಘಿಸಿ ಇರಾನ್ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ, ಅನಧಿಕೃತ ಮಾರ್ಗಗಳಲ್ಲಿ ಸಂಚರಿಸುವ ಅಮೆರಿಕದ ಯುದ್ಧನೌಕೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಇದರ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರವನ್ನು ಶೀಘ್ರದಲ್ಲೇ ಪುನರಾರಂಭಿಸಲು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿ, ನಂತರದ ಹಂತದಲ್ಲಿ ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಚರ್ಚೆ ನಡೆಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್ ಹಾಗೂ ಇರಾನ್‌ನ ಮನವಿಯ ಮೇರೆಗೆ ಯೋಜಿತ ಸೇನಾ ಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯನ್ನೂ ಟ್ರಂಪ್ ಬಹಿರಂಗಪಡಿಸಿದ್ದಾರೆ.

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಈ ಬೆಳವಣಿಗೆಗಳು ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅಂತರರಾಷ್ಟ್ರೀಯ ಸಮುದ್ರ ವ್ಯಾಪಾರದ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |     ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್: A14 ಪ್ರದೋಷ್ ‘ಮಾಫಿ ಸಾಕ್ಷಿ’ ಅರ್ಜಿ ಸಲ್ಲಿಕೆ     |     ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಹೊಸ ದಾಖಲೆ: ಭಾವನಾ ಕಾಂತ್‌ಗೆ ಪ್ರತಿಷ್ಠಿತ Fighter Combat Leader ಅರ್ಹತೆ     |     ‘ತೆಹೆಲ್ಕಾ’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ     |     ನಾಗ್ಪುರದಲ್ಲಿ ವಿದ್ಯಾರ್ಥಿನಿ ಅಪಹರಣ-ಅತ್ಯಾಚಾರ; ಊಟದ ಆರ್ಡರ್ ಪೊಲೀಸರಿಗೆ ನೀಡಿತು ಮಹತ್ವದ ಸುಳಿವು     |     ಹಾರ್ಮುಜ್ ಜಲಸಂಧಿ ವಿವಾದ ತೀವ್ರ: ಅಮೆರಿಕ ಹೇಳಿಕೆಗೆ ಇರಾನ್ ತಿರುಗೇಟು – ‘ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವಿಲ್ಲ’     |     ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: 5.25% ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ     |     ‘ಮೋದಿ ಪ್ರಧಾನಿ ಸ್ಥಾನ ತೊರೆದು ಇನ್‌ಫ್ಲುಯೆನ್ಸರ್ ಆಗಲಿ’ – ನೀಟ್ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಭಿಜೀತ್ ದೀಪ್ಕೆ ವಿವಾದಾತ್ಮಕ ಹೇಳಿಕೆ     |     ಆಗಸ್ಟ್‌ 3ಕ್ಕೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್–ವಿಜಯ್ ಭೇಟಿ? ವಿಧಾನಸೌಧದಲ್ಲಿ ಭರ್ಜರಿ ಸಿದ್ಧತೆ     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें