ಅಳಿವಿನಂಚಿಗೆ ಸಾಗಿದ ಕಾಡು ಕಾಡಂಚಿನ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳನ್ನು ಉಳಿಸಿದ ಸಿದ್ದರಾಮಯ್ಯ ಅವರ ಐತಿಹಾಸಿಕ ಬಜೆಟ್

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಮಾಜದ ಕಟ್ಟ ಕಡೆಯ ಆದಿವಾಸಿಗಳನ್ನು ಹಾಗೂ ಸೋಷಿತ ಸಮಾಜಗಳನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಇದಾಗಿದೆ

ಅಳಿವಿನಂಚಿನಲ್ಲಿರುವ ಕರ್ನಾಟಕದ ಕಾಡು- ಕಾಡಂಚಿನ ಅರಣ್ಯಾಧಾರಿತ ಮೂಲ ಆದಿವಾಸಿಗಳಅಭಿವೃದ್ದಿಗಿದು ಪರ್ವ ಕಾಲ ತಮ್ಮ ಐತಿಹಾಸಿಕ 17 ನೇ ಆಯವ್ಯದಲ್ಲಿಯೂ ಕಾಡು ಕಾಡಂಚಿನಲ್ಲಿ ವಾಸಿಸುತ್ತಾ ಅಳಿವಿನಂಚಿನಲ್ಲಿರುವ ಮೂಲ ಆದಿವಾಸಿಗಳನ್ನು ಮರೆಯದ ಕರ್ನಾಟ ಸರ್ಕಾರದ ಮುಖ್ಯ ಮಂತ್ರಿ ಸಿದ್ದರಾಯ್ಯ 79 ವರ್ಷದ ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಇಂದಿಗೂ ಕಾಡನ್ನೇ ನಂಬಿಕೊಂಡು ಕಾಡು ಮತ್ತು ಕಾಡಂಚಿನ ಹಾಡಿಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ಬದುಕುತ್ತಿರುವ ಸಮಾಜದ ಕಟ್ಟ ಕಡೆಯ ಅಳಿಯಂಚಿನಲ್ಲಿರುವ ಆದಿವಾಸಿಗಳನ್ನು ಉಳಿಸುವ ಹಲವಾರು ಮಹತ್ತರವಾದ ಯೋಜನೆಗಳನ್ನು ಬಜೆಟ್ ಗಳನ್ನು ಮಂಡನೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ . ಭಾರತದಲ್ಲಿ ಶೋಷಿತರು ,ಆದಿವಾಸಿಗಳು ಅಲೆಮಾರಿಗಳು ಹಾಗೂ ದೀನದಲಿತರಾದಿಯಾಗಿ ಸಮಾಜದ ಕಟ್ಟ ಕಡೆಯ ಸಮುದಾಯದ ಪರ ಕಾಣಿಸುವ ರಾಜಕಾರಣಿಗಳಲ್ಲಿ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಪ್ರಮುಖವಾಗಿ ಗುರುತಿಸಿಕೊಳ್ಳುತ್ತಾರೆ. ಸತತ 17 ಬಾರಿಗೆ ಬಜೆಟ್ ಮಂಡನೆ ಮಾಡುವ ಮೂಲಕ ಇತಿಹಾಸದ ನಿರ್ಮಾಣ ಮಾಡಿರುವ ನಾಡಿನ ಹೆಸರಾಂತ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ ನಲ್ಲಿ ಈ ದೇಶದ ನಿಜವಾದ ದೀನ ದಲಿತರು ಕಾಡು ಕಾಡಂಚಿನಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳು ಹಾಗೂ ಸಮಾಜದ ಕಟ್ಟ ಕಡೆಯ ಸಮುದಾಯಗಳ ಪರವಾಗಿ ಬಜೆಟ್ ಮಂಡನೆ ಮಾಡುವ ಮೂಲಕ ನಿಜವಾದ ದೇಶ ಮತ್ತು ರಾಜ್ಯದ ಅಭಿವೃದ್ಧಿಯ ಪದಕ್ಕೆ ಮುನ್ನುಡಿ ಹಾಕಿದ್ದಾರೆ. ಇಂದಿಗೂ ಕಾಡನ್ನೇ ನಂಬಿಕೊಂಡು ಕಾಡು ಮತ್ತು ಕಾಡಂಚಿನ ಹಾಡಿಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ, ಅಪೌಷ್ಠಿಕತೆ, ಸಿಕ್ಕಲ್ ಸೆಲ್ ಅನೀಮಿಯಾ ಮತ್ತು ಥಲ್ಸೆಮೇನಿಯಾ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿ ಅಕಾಲಿಕ ಮರಣಹೊಂದುತ್ತಾ, ಜನಸಂಖ್ಯೆಯಲ್ಲಿ ಇಳಿಮುಖವಾಗುತ್ತಾ ಅಳಿವಿನಂಚಿಗೆ ಬಂದು ತಲುಪಿರುವ 13 ಅರಣ್ಯಾಧಾರಿತ ಮೂಲ ಆದಿವಾಸಿಗಳಾದ ಜೇನುಕುರುಬ, ಕೊರಗ, ಇರುಳಿಗ, ಸೋಲಿಗ, ಯರವ, ಪಣಿಯನ್, ಗೌಡಲು, ಹಸಲರು, ಬೆಟ್ಟಕುರುಬ/ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಮುಂತಾದ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 2011 ರ ಜನಗಣತಿಯಂತೆ 1,92,720ಗಳಷ್ಟಿದೆ. ಪ್ರಸ್ತುತ ಇವರ ಜನಸಂಖ್ಯೆ ಅಂದಾಜು 4,99,866 ಇರಬಹುದು. ಭಾರತಕ್ಕೆ ಸ್ವತಂತ್ರ ಬಂದು ಇಂದಿಗೆ 79 ವರ್ಷಗಳು ಕಳೆದಿವೆ ಭಾರತದ ಎಲ್ಲ ಸಮಾಜ ವರ್ಗಗಳು ಸ್ವತಂತ್ರ ಮತ್ತು ಸ್ವಾಭಿಮಾನದಿಂದ ಬದುಕಲು ಸಂವಿಧಾನ ರಚನೆಯಾಗಿ 76 ವರ್ಷಗಳು ಕಳೆದರು, ಮೀಸಲಾತಿ ಜಾರಿಗೆ ತಂದು 76 ವರ್ಷಗಳು ಕಳೆದರೂ, ಕಾಡು ಕಾಡಂಚಿನ ಮೂಲ ಆದಿವಾಸಿಗಳು ಇಂದಿಗೂ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಔಧ್ಯೋಗಿಕ ಮತ್ತು ಆರೋಗ್ಯದ ದೃಷ್ಠಿಯಿಂದಲೂ ತೀರ ಹಿಂದುಳಿದು, ಕಾಡು ಮೇಡುಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಆದಿಮಾನವರಂತೆ ಬದುಕುತ್ತಿದ್ದಾರೆ. ಇವರು ಅಸಂಘಟಿತರಾಗಿದ್ದು, ಮೀಸಲಾತಿಯ ಪರಿವೇ ಇಲ್ಲದೆ ಕಾಫಿ ಎಸ್ಟೇಟ್ಗಳಲ್ಲಿ, ಲೈನ್ ಮನೆಗಳಲ್ಲಿ, ಇಟ್ಟಿಗೆ ಗೂಡುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಾ, ಸ್ವಂತ ಮನೆ ಇಲ್ಲದೆ, ದುಡಿದು ಬದುಕಲು ಒಂದಿಷ್ಟು ಭೂಮಿಯಿಲ್ಲದೆ ಜೀತದಾರರಾಗಿ, ಕೂಲಿಯಾಳುಗಳಾಗಿ ಕೆಲವರಿದ್ದರೆ, ಮತ್ತೆ ಕೆಲವರು ಕಾಡು ಮೇಡುಗಳಲ್ಲಿ ನೆಲೆ ಇಲ್ಲದೆ, ಅಲೆಯುತ್ತಾ ಗವಿ-ಗುಡಾರಗಳಲ್ಲಿ ಜೀವನ ಮಾಡುತ್ತಿರುವ ಮೂಲ ಆದಿವಾಸಿಗಳನ್ನು ಉಳಿಸಲು ತಮ್ಮ ಐತಿಹಾಸಿಕ 17 ನೇ ಬಜೆಟ್ ನಲ್ಲಿ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಕಾಡು ಮತ್ತು ಕಾಡಂಚಿನಲ್ಲಿ ಅಳಿವಿನಂಚಿನಲ್ಲಿರುವ ಮೂಲ ಆದಿವಾಸಿಗಳನ್ನು ಉಳಿಸಲು ಪಣತೊಟ್ಟು ತಮ್ಮ ಆಯವ್ಯಯದಲ್ಲಿ ಹಲವಾರು ಐತಿಹಾಸಿಕ ಘೋಷಣೆಗಳನ್ನು ನಿಜಕ್ಕೂ ಸುವರ್ಣ ಅಕ್ಷರದಲ್ಲಿ ಬರೆದೆ ಬಿಡಬೇಕಾದ ಸಂಗತಿಯಾಗಿದೆ. ಪ್ರಸ್ತುತ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ಅವರು ಅವಧಿಯಲ್ಲಿ ಅಳಿವಿನಂಚಿನಲ್ಲಿರುವ ಕಾಡು ಮತ್ತು ಕಾಡಂಚಿನಲ್ಲಿ ವಾಸ ಮಾಡುತ್ತಿರುವ ಅರಣ್ಯಾಧಾರಿತ ಮೂಲ ಆದಿವಾಸಿಗಳ ಅಭಿವೃದ್ಧಿಗೆ ಕೈಗೊಂಡ ಪ್ರಮುಖ ನಿರ್ಣಯಗಳು. 1. ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದ ಸ್ಥಾಪನೆ ಮತ್ತು 2015-16ನೇ ಸಾಲಿನ ಆಯವ್ಯಯದಲ್ಲಿನ (ಕಂಡಿಕೆ 207) ಘೋಷಣೆ:-ಕರ್ನಾಟಕ ರಾಜ್ಯದಲ್ಲಿರುವ 50 ಬುಡಕಟ್ಟುಗಳಲ್ಲಿ ಅಳಿವಿನಂಚಿಗೆ ಸೇರುತ್ತಿರುವ ಹಾಗೂ ಅತ್ಯಂತ ಪ್ರಾಚೀನ ಬುಡಕಟ್ಟುಗಳನ್ನು ಉಳಿಸಲು ಮಾನ್ಯ ಮುಖ್ಯಮಂತ್ರಿಗಳು ವಿಶೇಷ ಕಾಳಜಿವಹಿಸಿ ತಮ್ಮ 2015-16ನೇ ಸಾಲಿನ ಆಯವ್ಯಯದಲ್ಲಿ (ಕಂಡಿಕೆ 207) ಕರ್ನಾಟಕ ರಾಜ್ಯದ ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಜೇನುಕುರುಬ, ಕೊರಗ, ಇರುಳಿಗ, ಸೋಲಿಗ, ಸಿದ್ದಿ, ಬೆಟ್ಟಕುರುಬ, ಕುಡಿಯ/ಮಲೆಕುಡಿಯ, ಪಣಿಯನ್, ಯರವ, ಹಸಲರು ಮತ್ತು ಗೌಡಲು ಸೇರಿದಂತೆ 12 ಅರಣ್ಯಾಧಾರಿತ ಮೂಲ ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಜೊತೆಗೆ ಅವುಗಳ ಕಲೆ, ಸಂಸ್ಕೃತಿ, ಭಾಷೆ ಮತ್ತು ಇತರೆ ವಿಷಯಗಳ ಬಗ್ಗೆ ಅಧ್ಯಯನ ಮಾಡಿ ಉಳಿಸಿಕೊಳ್ಳಲು ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರವನ್ನು ಆರಂಭಿಸಲಾಗಿದೆ. ಪ್ರಸ್ತುತ ಇದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ. 2. 2025-26ನೇ ಸಾಲಿನ ಆಯವ್ಯಯದ ಕಂಡಿಕೆ 199ರ ಘೋಷಣೆ:2025-26ನೇ ಸಾಲಿನ ಆಯವ್ಯಯದ ಕಂಡಿಕೆ 199ರಲ್ಲಿ ‘ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಸಲರು, ಗೌಡಲು, ಸಿದ್ದಿ, ಬೆಟ್ಟ ಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಮಾಡುವುದಾಗಿ ಘೋಷಿಸಿರುವುದು ಸ್ವಾಗತಾರ್ಹ.ಈ ಮಹತ್ವಪೂರ್ಣ ನಿರ್ಣಯದಿಂದ ಸಂವಿಧಾನ ಜಾರಿಯಾಗಿ 79 ವರ್ಷಗಳು ಕಳೆದರೂ ಸರ್ಕಾರಿ ಹುದ್ದೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗದ, ನತದೃಷ್ಟ ಆದಿವಾಸಿ ಬುಡಕಟ್ಟುಗಳು ಸರ್ಕಾರಿ ಸೇವೆಯನ್ನು ಪಡೆದು, ಸಮಾಜದ ಮುಖ್ಯವಾಹಿನಿಗೆ ಕರೆತರುವ ಯೋಜನೆಯಾಗಿದೆ. 3. 2026-27 ನೇ ಸಾಲಿನ ಆಯವ್ಯಯದ ಕಂಡಿಕೆ 203 ರಲ್ಲಿ ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 13 ಬುಡಕಟ್ಟು ಜನಾಂಗಗಳಾದ ಜೇನು ಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಸಲರು, ಗೌಡಲು, ಸಿದ್ದಿ, ಬೆಟ್ಟ ಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯಈ ಜನಾಂಗಗಳಿಗೆ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಘೋಷಣೆ 4. 2026-27 ನೇ ಸಾಲಿನ ಆಯವ್ಯಯದ ಕಂಡಿಕೆ 202 ರಲ್ಲಿ ವಾಲ್ಮಿಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಆರೈಕೆಗಾಗಿ 119 ಮಹಿಳಾ ಕೇರ ಟೇಕರ್ ಹುದ್ದೆಗಗಳನ್ನು ಮಂಜೂರು ಮಾಡಲಾಗಿದೆ. 5. ಕರ್ನಾಟಕ ರಾಜ್ಯದ ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳ ಅಭಿವೃದ್ಧಿಗಾಗಿ 200 ಕೋಟಿ ಅನುದಾನ ನಿಗದಿ ಮಾಡಿರುವುದು ಹಾಗೂ 47,859 ಕುಟುಂಬಗಳಿಗೆ 120 ಕೋಟಿ ಅನುದಾನ ಒದಗಿಸಲಾಯಿತು. 6. ಕರ್ನಾಟಕ ರಾಜ್ಯದ ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳಿಗೆ ವರ್ಷ ಪೂರ್ತಿ ಪೌಷ್ಟಿಕ ಆಹಾರ ನೀಡುತ್ತಿರುವುದು, 7. ಕಾಡಿನ ಮಧ್ಯ ಭಾಗದಲ್ಲಿದ್ದು ಶಿಕ್ಷಣದಿಂದ ವಂಚಿತರಾಗಿದ್ದ ಆದಿವಾಸಿ ಮಕ್ಕಳಿಗಾಗಿ ಹಾಡಿಯ ಆಶ್ರಮ ಶಾಲೆಗಳನ್ನು 7ನೇ ತರಗತಿಯಿಂದ 12ನೇ ತರಗತಿವರೆಗೆ ಉನ್ನತೀಕರಣಗೊಳಿಸಲಾಯಿತು. 8. ಲ್ಯಾಮ್ಸ್ ಸಹಕಾರಿ ಸಂಘಗಳ ಮೂಲಕ 12 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳಿಗೆ ತಲಾ 5 ಲಕ್ಷ ಸಹಾಯಧನ ಸಹಾಯ. 9. ಚಾಮರಾಜನಗರ ಜಿಲ್ಲೆಯಲ್ಲಿ 22 ಹಾಡಿಗಳಲ್ಲಿನ 1854 ಕುಟುಂಬಗಳು ಇಂದು ವಿದ್ಯುತ್ ದೀಪದ ಬೆಳಕನ್ನು ಕಾಣುವಂತಾಯಿತು. 10. ಕರ್ನಾಟಕ ರಾಜ್ಯದ ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳ ಆರೋಗ್ಯ ಅಭಿವೃದ್ಧಿಗಾಗಿ ಜಿಲ್ಲಾ ಮಟ್ಟದಲ್ಲಿ ಹೆಲ್ತ್ ನ್ಯಾವಿಗೇಟರ್ ನೇಮಕ ಮಾಡಲಾಗಿದೆ. 11. ಇದರ ಜೊತೆಗೆ 5 ಜನ ಸಚಿವರ ಸಮ್ಮುಖದಲ್ಲಿ ಸುಮಾರು 4 ಗಂಟೆಗೂ ಅಧಿಕ ಸಮಯದಲ್ಲಿ ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳ ಸಮಸ್ಯೆಗಳ ಕುರಿತು 4 ಸಭೆಗಳನ್ನು ಮಾಡಿ ಹಲವಾರು ಸಮಸ್ಯೆಗಳನ್ನು ಅಲ್ಲಿಯೇ ಭಗೆಹರಿಸಲಾಗಿದೆ. 12. ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳ ಸಮಸ್ಯೆಗಳನ್ನು ಕುರಿತು ಸರ್ಕಾರದ ಕಾರ್ಯದರ್ಶಿ ಗಳ ಹಂತದಲ್ಲಿ ನಿರ್ದೇಶಕರ ಹಂತದಲ್ಲಿ ಹಲವಾರು ಸಭೆಗಳನ್ನು ಏರ್ಪಡಿಸಲಾಗಿದೆ. ಭಾರತಕ್ಕೆ ಸ್ವತಂತ್ರ ಬಂದು 789 ವರ್ಷಗಳು ಕಳೆದರು ಇಂತಹ ಹತ್ತಾರು ಯೋಜನೆಗಳನ್ನು ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳಿಗೆ ಕೈಗೊಳ್ಳು ಸಾಧ್ಯವಾಗಿರುವುದಿಲ್ಲ. ಆದರೆ ಸದಾ ಆದಿವಾಸಿ ಶೋಷಿತ ಮತ್ತು ದೀನ ದಲಿತರ ಪರವಾದ ನಿಲುವಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯವಾಯಿತಿ ಎಂದರೆ ತಪ್ಪಾಗಲಾದು ಇದಕ್ಕೆ ಪ್ರಮುಖ ಕಾರಣ ಅವರ ಸಮೀಪದಲ್ಲಿರುವ ಸರ್ಕಾರದ ಕಾರ್ಯದರ್ಶಿಗಳು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ರಂದೀಪ್ ಸಾರ್ ಪ್ರಸ್ತುತ ಶ್ರೀಮತಿ ಕಣಗವಲ್ಲಿ ಮೇಡಂ ಹಾಗೂ ಮಾನ್ಯ ಮುಖ್ಯ ಮತ್ರಿಗಳ ಆಪ್ತ ಕಾರ್ಯದರ್ಶಿಗಳಾದ ಡಾ. ವೆಂಕಟೇಶಯ್ಯ ಸಾಹೇಬರು, ರಾಮಯ್ಯ ಸಾಹೇಬರು ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಯೋಗೆಶ್ ಟಿ. ಯಂತವರ ಸಾಮಾಜಿಕ ಕಳಕಳಿ ಮತ್ತು ಕಾಳಜಿ ಇರುವ ಅಧಿಕಾರಿಗಳು ಎಂದರೇ ಅತಿಶಯೋಕ್ತಿ ಆಗಲಾರದು. ಇವತ್ತಿಗೂ ಕೂಡ ಒಂದು ಸರ್ಕಾರಿ ನೌಕರರು ಇಲ್ಲದ ಈ ಕಟ್ಟಕಡೆ ಅರಣ್ಯಾಧಾರಿತ ಮೂಲ ಆದಿವಾಸಿ ಬುಡಕಟ್ಟು ಸಮುದಾಯದವರನ್ನು ಸಿವಿಲ್ ಸರ್ವಿಸ್ ಸೇವೆಗಳಿಗೆ ನೇಮಿಸಲು ವಿಶೇಷ ಪ್ರಕರಣವಾಗಿ ಪರಿಗಣಿಸಿ ನೇರ ನೇಮಕಾತಿ ಅವಕಾಶ ಮಾಡಿಕೊಟ್ಟಿರುವುದನ್ನು ಕೂಡಲೇ ಜಾರಿ ಮಾಡಬೇಕು ಹಾಗೂ ಸದಾ ಇಂತಹ ಸಮಾಜಮುಖಿ ಅಧಿಕಾರಿಗಳನ್ನು ತಮ್ಮ ಸಮೀಪದಲ್ಲೆ ಇರಿಸಿಕೊಳ್ಳಬೇಕೆಂಬುದು ಅಳಿವಿನಂಚಿನಲ್ಲಿರುವ 13 ಅರಣ್ಯ ಆಧಾರಿತ ಆದಿವಾಸಿ ಬುಡಕಟ್ಟುಗಳ ಒತ್ತಾಯವಾಗಿದೆ. ಇಂತಹ ಮಹತ್ತರವಾದ ಯೋಜನೆಳಿಂದಾಗಿ ಅಳಿದು ಹೋಗುತ್ತಿರುವ ಆದಿವಾಸಿಗಳಲ್ಲಿ ಇಂದು ಹೊಸ ಚೈತನ್ಯ ಮತ್ತು ಮರುಜೀವ ಬಂದಂತಾಗಿದೆ ಅದರಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಸಮಸ್ತ ಆದಿವಾಸಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸುವ ಜೊತೆಗೆ ತಾವು ಈ ಬಾರಿ ಆಯವ್ಯಯದಲ್ಲಿ ಘೋಷಣೆ ಮಾಡಿದ ಎಲ್ಲಾ ಆದಿವಾಸಿ ಉಳಿವಿನ ಯೋಜನೆಗಳನ್ನು ಅನುಷ್ಠಾನಗೊಳಿಸಿ ನಮ್ಮನ್ನು ಉಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ ಡಾ.ಕೃಷ್ಣಮೂರ್ತಿ ಕೆ.ವಿ ಇರುಳಿಗ ಸಮುದಾಯದ

Informatie_over_de_gt_bet_app_voor_een_optimale_wedstrategie     |     Fortunate_players_discover_winning_secrets_within_the_dragon_slots_game_experien     |     Genuine_access_details_and_dragon_slots_casino_login_for_seamless_gameplay_today     |     Remarkable_realms_await_in_our_detailed_dragon_slots_review_and_guide_to_fiery_w     |     Vibrant_fortunes_await_with_the_dragon_slots_game_and_exciting_bonus_rounds_toda     |     Искусный_азарт_и_Olimp_Casino_открывают_путь_к_эп-4939377     |     Впечатляющий_геймплей_и_олимп_казино_откро     |     Азартный_драйв_и_ап_икс_в_каждом_мгновении_г     |     Strategic_betting_with_aviator_unlocks_potential_for_increasingly_rewarding_game     |     Захватывающий_мир_азартных_игр_и_казино_оли     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें