ಸಿದ್ದರಾಮಯ್ಯ ಅವರ 2025-26 ಆಯವ್ಯದಲ್ಲಿ ಘೋಷಣೆಯಾದ
2025-26 ನೇ ಸಾಲಿನ ಆಯವ್ಯಯದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಮಂಡಿಸಿದAತೆ ಕಾಡು ಮತ್ತು ಕಾಡಂಚಿನಲ್ಲಿರುವ ಮೂಲ ಆದಿವಾಸಿಗಳಾದ ಜೇನುಕುರುಬ, ಕೊರಗ, ಇರುಳಿಗ, ಸೋಲಿಗ, ಸಿದ್ಧಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ/ಮಲೆಕುಡಿ, ಪಣಿಯ, ಯರವ, ಹಸಲರು, ಮತ್ತು ಗೌಡಲು ಜನಾಂಗಗಳಿಗೆ ರಾಜ್ಯ ಸಿವೀಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯ ಘೋಷಣೆಯು. ಈವರೆಗೂ ಒಂದು ಆದೇಶವು ಆಗದಿರುವ ಬಗ್ಗೆ.
ಉಲ್ಲೇಖ : 1. ಕರ್ನಾಟಕ ಸರ್ಕಾರದ ರಾಜ್ಯ ಬಜೇಟ್( ಆಯವ್ಯಯ) -2025/26
ಕಾಡು ಮತ್ತು ಕಾಡಂಚಿನಲ್ಲಿರುವ ಮೂಲ ಆದಿವಾಸಿಗಳ ವಿದ್ಯಾವಂತರ ಅಂದಾಜು ಮಾಹಿತಿ.
ಕ್ರ.ಸಂಬುಡಕಟ್ಟಿನ ಹೆಸರು9 ಜಿಲ್ಲೆಗಳು ಸೇರಿ ಒಟ್ಟು ವಿದ್ಯಾರ್ಹತೆ ಹೊಂದಿರುವ ಯುವಕ/ಯುವತಿಯರ ಸಂಖ್ಯೆ
ಒಟ್ಟು
SSLC PUC Degree Masters
DegreePh.D
1 ಜೇನುಕುರುಬ 1091 273 78 15 0 1457
2 ಕೊರಗ 196 168 111 40 4 519
3 ಇರುಳಿಗ 263 42 30 5 1 314
4 ಕುಡಿಯ 120 80 75 15 0 290
5 ಮಲೆಕುಡಿಯ 1913 1343 652 362 1 4271
6 ಬೆಟ್ಟಕುರುಬ 32 60 40 9 0 141
7 ಕಾಡುಕುರುಬ 25 22 9 3 0 59
8 ಸೋಲಿಗರು 2350 1025 400 60 3 3838
9 ಯರವ 143 157 45 06 0 351
10 ಹಸಲರು 1150 750 470 162 1 2884
11 ಗೌಡಲು 46 25 10 5 0 86
12 ಸಿದ್ದಿ 350 150 50 5 2 557
13 ಪಣಿಯನ್ 13 12 7 4 1 37
MlÄÖ
7692
4107
1977
691
13
ಮೇಲ್ಕಂಡ ವಿಷಯ ಹಾಗೂ ಉಲ್ಲೇಖ (1)ಕ್ಕೆ ಸಂಬAಧಿಸಿದAತೆ ಮಾನ್ಯ ಮುಖ್ಯಮಂತ್ರಿಯವರು 78 ವರ್ಷದ,ಭಾರತ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಾಜದ ಕಟ್ಟ ಕಡೆಯ ಅಳಿಯಂಚಿನಲ್ಲಿದ್ದ ಆದಿವಾಸಿಗಳನ್ನು ಉಳಿಸಿದ ಬಜೆಟ್ ಮಂಡನೆ ಭಾರತದಲ್ಲಿ ಶೋಷಿತರು, ಆದಿವಾಸಿಗಳು ಅಲೆಮಾರಿಗಳು ಹಾಗೂ ದೀನ ದಲಿತರಾದಿಯಾಗಿ ಸಮಾಜದ ಕಟ್ಟ ಕಡೆಯ ಸಮುದಾಯದ ಪರ ಕಾಣಿಸುವ ರಾಜಕಾರಣಿಗಳಲ್ಲಿ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಪ್ರಮುಖವಾಗಿ ಗುರುತಿಸಿಕೊಳ್ಳುತ್ತಾರೆ. ಸತತ 16 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ ನಲ್ಲಿ ಈ ದೇಶದ ನಿಜವಾದ ದೀನ ದಲಿತರು ಕಾಡು ಕಾಡಂಚಿನಲ್ಲಿ ವಾಸ ಮಾಡುತ್ತಿರುವ ಆದಿವಾಸಿಗಳು ಹಾಗೂ ಸಮಾಜದ ಕಟ್ಟ ಕಡೆಯ ಸಮುದಾಯಗಳ ಪರವಾಗಿ ಬಜೆಟ್ ಮಂಡನೆ ಮಾಡುವ ಮೂಲಕ ನಿಜವಾದ ದೇಶ ಮತ್ತು ರಾಜ್ಯದ ಅಭಿವೃದ್ಧಿಯ ಪದಕ್ಕೆ ಮುನ್ನುಡಿ ಹಾಕಿದ್ದಾರೆ. ಇಂದಿಗೂ ಕಾಡನ್ನೇ ನಂಬಿಕೊAಡು ಕಾಡು ಮತ್ತು ಕಾಡಂಚಿನ ಹಾಡಿಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ, ಅಪೌಷ್ಠಿಕತೆ, ಸಿಕ್ಕಲ್ ಸೆಲ್ ಅನೀಮಿಯಾ ಮತ್ತು ಥಲ್ಸೆಮೇನಿಯಾ ಮುಂತಾದ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗಿ ಅಕಾಲಿಕ ಮರಣಹೊಂದುತ್ತಾ, ಜನಸಂಖ್ಯೆಯಲ್ಲಿ ಇಳಿಮುಖವಾಗುತ್ತಾ ಅಳಿವಿನಂಚಿಗೆ ಬಂದು ತಲುಪಿರುವ 13 ಅರಣ್ಯಾಧಾರಿತ ಮೂಲ ಆದಿವಾಸಿಗಳಾದ ಜೇನುಕುರುಬ, ಕೊರಗ, ಇರುಳಿಗ, ಸೋಲಿಗ, ಯರವ, ಪಣಿಯನ್, ಗೌಡಲು, ಹಸಲರು ಬೆಟ್ಟಕುರುಬ/ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ ಮುಂತಾದ ಅರಣ್ಯಾಧಾರಿತ ಆದಿವಾಸಿ ಬುಡಕಟ್ಟುಗಳ ಒಟ್ಟು ಜನಸಂಖ್ಯೆ 2011 ರ ಜನಗಣತಿಯಂತೆ 1,92,720ಗಳಷ್ಟಿದೆ. ಪ್ರಸ್ತುತ ಇವರ ಜನಸಂಖ್ಯೆ ಅಂದಾಜು 4,99,866 ಇರಬಹುದು.ಭಾರತಕ್ಕೆ ಸ್ವತಂತ್ರ ಬಂದು ಸಿಂದಗಿ 78 ವರ್ಷಗಳು ಕಳೆದಿವೆ ಭಾರತದ ಎಲ್ಲ ಸಮಾಜ ವರ್ಗಗಳು ಸ್ವತಂತ್ರ ಮತ್ತು ಸ್ವಾಭಿಮಾನದಿಂದ ಬದುಕಲು ಸಂವಿಧಾನ ರಚನೆಯಾಗಿ 75 ವರ್ಷಗಳು ಕಳೆದರು, ಭಾರತಕ್ಕೆ ಸ್ವತಂತ್ರ್ಯ ಬಂದು ಇಂದಿಗೆ 78 ವರ್ಷಗಳು ಕಳೆದು ಸಂವಿಧಾನ ರಚನೆಯಾಗಿ, ಮೀಸಲಾತಿ ಜಾರಿಗೆ ತಂದು 75ವರ್ಷಗಳು ಕಳೆದರೂ, ಈ ಮೂಲ ಆದಿವಾಸಿಗಳು ಇಂದಿಗೂ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಔಧ್ಯೋಗಿಕ ಮತ್ತು ಆರೋಗ್ಯದ ದೃಷ್ಠಿಯಿಂದಲೂ ತೀರ ಹಿಂದುಳಿದು, ಕಾಡು ಮೇಡುಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದೆ ಆದಿಮಾನವರಂತೆ ಬದುಕುತ್ತಿದ್ದಾರೆ. ಇವರು ಅಸಂಘಟಿತರಾಗಿದ್ದು, ಮೀಸಲಾತಿಯ ಪರಿವೇ ಇಲ್ಲದೆ ಕಾಫಿ ಎಸ್ಟೇಟ್ಗಳಲ್ಲಿ, ಲೈನ್ ಮನೆಗಳಲ್ಲಿ, ಇಟ್ಟಿಗೆ ಗೂಡುಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಾ, ಸ್ವಂತ ಮನೆ ಇಲ್ಲದೆ, ದುಡಿದು ಬದುಕಲು ಒಂದಿಷ್ಟು ಭೂಮಿಯಿಲ್ಲದೆ ಜೀತದಾರರಾಗಿ, ಕೂಲಿಯಾಳುಗಳಾಗಿ ಕೆಲವರಿದ್ದರೆ, ಮತ್ತೆ ಕೆಲವರು ಕಾಡು ಮೇಡುಗಳಲ್ಲಿ ನೆಲೆ ಇಲ್ಲದೆ, ಅಲೆಯುತ್ತಾ ಗವಿ,ಗುಡಾರಗಳಲ್ಲಿ ಜೀವನ ಮಾಡುತ್ತಿರುವ ಮೂಲ ಮೂಲ ಆದಿವಾಸಿಗಳನ್ನು ಉಳಿಸಲು ತಮ್ಮ ಐತಿಹಾಸಿಕ 16ನೇ ಬಜೆಟ್ ನಲ್ಲಿ ಪ್ರಸ್ತುತ ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು ಅಳಿವಿನಂಚಿನಲ್ಲಿರುವ ಆದಿವಾಸಿಗಳನ್ನು ಉಳಿಸಲು ಪಣತೊಟ್ಟು ತಮ್ಮ ಆಯವ್ಯಯದಲ್ಲಿ ಹಲವಾರು ಐತಿಹಾಸಿಕ ಘೋಷಣೆಗಳನ್ನು ನಿಜಕ್ಕೂ ಸುವರ್ಣ ಅಕ್ಷರದಲ್ಲಿ ಬರೆದೆ ಬಿಡಬೇಕಾದ ಸಂಗತಿಯಾಗಿದೆ.
ಮೂಲ ಆದಿವಾಸಿಗಳ ಅಧ್ಯಯನಕೇಂದ್ರವು, ಕರ್ನಾಟಕರಾಜ್ಯದಲ್ಲಿರುವ 12 ಮೂಲ ಆದಿವಾಸಿ ಸಮುದಾಯಗಳ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಮತ್ತು ರೂಢಿ ಸಂಪ್ರದಾಯಗಳನ್ನು ಸಂರಕ್ಷಿಸುವ ಜೊತೆಗೆ ಈ ಸಮುದಾಯಗಳು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ, ಇವರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವ ಕೆಲಸವನ್ನು ಆದಿವಾಸಿಗಳ ಬಗ್ಗೆ ಆಳವಾದ ಜ್ಞಾನ, ಕಾಳಜಿ ಮತ್ತು ಸೂಕ್ಷö್ಮ ಸಂವೇದನೆ ಇರುವ ಅಧಿಕಾರಿಗಳನ್ನೆ ನೇಮಕ ಮಾಡಬೇಕಾಗಿರುವುದರಿಂದ ಆದಿವಾಸಿಗಳ ಅಭಿವೃದ್ಧಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಎಲ್ಲಾ ಆಯಗಟ್ಟಿನ ಹುದ್ದೆಗಳಿಗೆ ಮೂಲ ಆದಿವಾಸಿ ಸಮುದಾಯದವರನ್ನೇ ವಿಶೇಷ ಪ್ರಕರಣವಾಗಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಲ್ಲದೆ ಅವರ ಉನ್ನತ ಶಿಕ್ಷಣ (ಪಿಎಚ್.ಡಿ) ಮತ್ತು ಸೇವಾನುಭವವನ್ನು ಮಾನದಂಡವನ್ನಾಗಿಟ್ಟು ಕೊಂಡು ನೇಮಿಸಿದರೆ ಮಾತ್ರ ಆದಿವಾಸಿಗಳ ಸಮಗ್ರ ಅಧ್ಯಯನ ಮತ್ತು ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಹಾಗೂ ಮೊದಲ ತಲೆಮಾರಿನ ಆದಿವಾಸಿ ವಿದ್ಯಾವಂತರಿಗೆ ಅವಕಾಶ ನೀಡಿದಂತಾಗುತ್ತದೆ.
- ಆದ್ದರಿಂದ ಮಾನ್ಯ ಮುಖ್ಯ ಮಂತ್ರಿಗಳು 2025-26 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯದ ಕಾಡು ಮತ್ತು ಕಾಡಂಚಿನಲ್ಲಿ ವಾಸಿಸುತ್ತಿರುವ 13 ಮೂಲ ಆದಿವಾಸಿ ಜನಾಂಗದ ಮೊದಲ ತಲೆಮಾರಿನ ವಿದ್ಯಾವಂತರನ್ನು ಅವರ ವಿದ್ಯಾರ್ಹತೆಗೆ ಅನುಗುಣವಾಗಿ ರಾಜ್ಯ ಸಿವೀಲ್ ಸೇವೆಗಳಲ್ಲಿ ಪ್ರತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಮಾಡಲು ಅಗತ್ಯವಾದ ವೃಂದ ಮತ್ತು ನೇಮಕಾತಿ ನಿಯಮವನ್ನು ರಚಿಸುವುದು ಅಥವಾ ತಿದ್ದುಪಡಿಮಾಡಬೇಕೆಂದು ಹಾಗೂ ಈ ಕೂಡಲೇ ಈ ಬಗ್ಗೆ ಸರ್ಕಾರ ಆಧೇಶ ಮಾಡಬೇಕಾಗಿದೆ.

