ಸೂಕ್ಷ್ಮ ಸಂವೇದನೆಯ ಕವಿ ಡಾ. ನೆಲ್ಲುಕುಂಟೆ ವೆಂಕಟೇಶ್ ಅವರ “ಮಿಥಿಲೆಯ ಮಾವಿನ ಮರ ‘ಕವನ ಸಂಕಲ ಬಿಡುಗಡೆ.

ಸೂಕ್ಷ್ಮ ಸಂವೇದನೆಯ ಕವಿ ಡಾ. ನೆಲ್ಲುಕುಂಟೆ ವೆಂಕಟೇಶ್ ಅವರ “ಮಿಥಿಲೆಯ ಮಾವಿನ ಮರ’ಕವನಸಂಕಲ ಬಿಡುಗಡೆ.

ನೆನ್ನೆ ದಿನ ಅಂದರೆ 4 ಏಪ್ರಿಲ್, ಶನಿವಾರ 2026, ಸಂಜೆ 4:30 ಕ್ಕೆ ಸ್ಥಳ: ಡಾ. ಎಚ್ ಎನ್ ಮಲ್ಟಿಮೀಡಿಯಾ ಹಾಲ್, ನ್ಯಾಷನಲ್ ಕಾಲೇಜು, ಪಂಪ ಮಹಾಕವಿ ರಸ್ತೆ, ಬಸವನಗುಡಿಯಲ್ಲಿ ನಡೆಯಿತು.ಈ  ಕಾರ್ಯಕ್ರಮದ ಉದ್ಘಾಟನೆಯನ್ನು     ಪ್ರಸಿದ್ಧ  ಕವಿಗಳು ಹಾಗೂ ಭಾಷಾ ತಜ್ಞರಾದ   ಕೆ ವಿ ನಾರಾಯಣ ಅವರು ಉದ್ಘಾಟಿಸಿದರು.

ಪುಸ್ತಕದ ಕುರಿತು: ವಿನಯಾ ಒಕ್ಕುಂದ ಕವಯತ್ರಿ- ವಿಮರ್ಶಕರು

ಮುಖ್ಯ ಅತಿಥಿ: ಕೆ ಪಿ ಸುರೇಶ ಅನುವಾದಕ – ರಾಜಕೀಯ ಚಿಂತಕರು

ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್ ಸಾಹಿತಿ – ಚಿಂತಕರು

ಉಪಸ್ಥಿತಿ: ನೆಲ್ಲುಕುಂಟೆ ವೆಂಕಟೇಶ್

ಗಾಳಿ ದುರುಗಪ್ಪ ಅವರ ಬೀಟ್ಸ್ ಆಫ್ ಹಂಪಿ ತಂಡದಿಂದ ಪ್ಯೂಷನ್ ಮ್ಯೂಸಿಕ್ ಕಾರ್ಯಕ್ರಮ

ಕವಿತೆಗಳ ಓದು:

ಹುಲಿಕುಂಟೆ ಮೂರ್ತಿ, ಎಸ್ ಕೆ ಪ್ರೇಮಾವತಿ

ಯು ಟಿ ಫರ್ಜಾನ, ಕೆ ಪಿ ಲಕ್ಷ್ಮಣ್, ಮಹೇಶ್ ಎಸ್ ಪಿ.

ನೆಲ್ಲುಕುಂಟೆ ವೆಂಕಟೇಶ್‌

ನೆಲ್ಲುಕುಂಟೆ ವೆಂಕಟೇಶ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನೆಲ್ಲುಕುಂಟೆಯವರಾದ ವೆಂಕಟೇಶ್ ಮೂಲತಃ ಸಾಹಿತ್ಯ ವಿದ್ಯಾರ್ಥಿ. ಸಮಕಾಲೀನ ವಿದ್ಯಮಾನಗಳಿಗೆ ತಮ್ಮ ಕಾವ್ಯ ಮತ್ತು ಚಿಂತನಾ ಬರೆಹಗಳ ಮೂಲಕ ತೀವ್ರವಾಗಿ ಸ್ಪಂದಿಸುವ ಕರ್ನಾಟಕದ ಮುಖ್ಯ ಬರಹಗಾರರಲ್ಲಿ ಒಬ್ಬರು. ತಮ್ಮ ಬರೆಹಗಳ ಮೂಲಕ ಕನ್ನಡಕ್ಕೆ ಹೊಸ ಚಿಂತನೆಗಳನ್ನು  ಸದಾ ತುಡಿಯುವ ಅವರು, ಬಹುಶಿಸ್ತೀಯ ಅಧ್ಯಯನದ ಮೂಲಕ ಕಟ್ಟಿಕೊಂಡ ತಿಳುವಳಿಕೆಯನ್ನು ಪ್ರಸ್ತುತಪಡಿಸಿ ಕನ್ನಡದ  ನೆಲೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ತಳಿ ವಿಜ್ಞಾನ, ಭಾಷಾ ವಿಜ್ಞಾನ, ಚರಿತ್ರೆ, ಸಾಹಿತ್ಯ, ಸಂಸ್ಕೃತಿ ಅಧ್ಯಯನ ಹೀಗೆ ಬೇರೆ ಬೇರೆ ಜ್ಞಾನಶಿಸ್ತುಗಳ ಅರಿವನ್ನು ಒಂದು ಚೌಕಟ್ಟಿಗೆ ತಂದು ಅದನ್ನು ಕಥನವಾಗಿಸಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದಾರೆ. ರಹಮತ್‌ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ರಾಷ್ಟ್ರೀಯ ಚಿಂತನೆಗಳ ಸ್ವರೂಪ’ ಎಂಬ ವಿಷಯ ಕುಲಿತು ಸಂಶೋಧನೆ ನಡೆಸಿ ಕನ್ನಡ ವಿವಿ ಯಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಇತರೆ ಕವಿಗಳ ಜೊತೆ ಸೇರಿ ಶ್ರೀಲಂಕಾದ ತಮಿಳು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ತಮ್ಮ ಚುಟುಕು ಬರೆಹಗಳ ಮೂಲಕವೇ ಹೆಚ್ಚು ಸದ್ದು ಮಾಡಿದ್ದ ವೆಂಕಟೇಶ್ ನೆಲ್ಲುಕುಂಟೆ ಅವರ ಮೊಟ್ಟ ಮೊದಲ ಕವನ ಸಂಕಲನ ‘ಮಿಥಿಲೆಯ ಮಾವಿನ ಮರ’ ಈಗ ಪ್ರಕಟವಾಗುತ್ತಿದೆ.

– ಪೀರ್ ಭಾಷಾ ನೆಲ್ಲುಕುಂಟೆ ವೆಂಕಟೇಶ್ ಅವರ ಈ ಸಂಕಲನ ಜಡಿಕವನಗಳಂತೆ ಕಂಡರೂ ಇಡೀ ಸಂಕಲನವೇ ಒಂದು ಕವನವೇನೋ ಎಂಬ ಭಾವನೆ ಓದುವವರಲ್ಲಿ ಮೂಡುತ್ತದೆ.

ಒಟ್ಟಂದದಲ್ಲಿ ಮೂಡುವ ‘ಭಾವಸ್ಥಿತಿ’ ಓದುಗರಾದ ನಮ್ಮನ್ನು ಆವರಿಸುತ್ತದೆ. ಈ ಸನ್ನಿವೇಶದಲ್ಲಿ ‘ನಾವು ಯಾರು?’ ಎಂಬ

ಪ್ರಶ್ನೆ ಹುಟ್ಟಲೇ ಬೇಕು. ಇಲ್ಲಿನ ಒಂದು

ಕವಿತೆಯು ಬಹಳ ಕಟುವಾಗಿ ಟೀಕಿಸುವ ‘ನಡು ವಾರ್ಗಿಕ’ರಾಗಿ (ಮಿಡ್ಸ್ ಕ್ಲಾಸ್) ನಮ್ಮನ್ನು ನಾವೇ ನೋಡಿಕೊಳ್ಳದೆ, ಕವಿತೆಗಳನ್ನು ಓದುತ್ತಿರುವ ವಿದ್ಯಾವಂತರಾದ ನಮಗೆ ವಿಧಿಯಿಲ್ಲ. ಆಗ ಹುಟ್ಟುವುದು, ಸುಡುವಂತಹ “ಅಪರಾಧ ಪ್ರಜ್ಞೆ’. ಒಂದು ಕಾಲದಲ್ಲಿ ಸಿದ್ದಲಿಂಗಯ್ಯ,

ದೇವನೂರ ಮಹಾದೇವರ ಬರವಣಿಗೆಯು ಈ ರೀತಿಯ ‘ನಾಚಿಕೆ’ ಹುಟ್ಟಿಸುವ ಪ್ರಯತ್ನ ಮಾಡಿದವು. ಆದರೆ ಮನುಷ್ಯರ ‘ವರ್ಗ ಸ್ವಭಾವ’ದಲ್ಲಿ ಬದಲಾವಣೆ ತರುವುದು ಸುಲಭವಲ್ಲ. ಕಾನೂನು ತಂದಷ್ಟು ಬದಲಾವಣೆಯನ್ನು ‘ಹೃದಯ ಸಾಕ್ಷಿ'(?) ತರುವುದಿಲ್ಲ. ಈ ಮಾತಿಗೆ ಸಾಕ್ಷಿಯೆನ್ನುವಂತೆ ಇಲ್ಲಿನ ಕವಿತೆಗಳ ಹತಾಶೆ ಇದೆ. ‘ಅಲ್ಲೇ ಕುಂತವೋ, ಅವರು ಅಲ್ಲೇ ಕುಂತವೆ’ ಎನ್ನುವುದೇ ಕಟುಸತ್ಯ

ಈ ಕವನಗಳಲ್ಲಿ ದೊಡ್ಡ ಹೃದಯಯವಂತಿಕೆ ಮತ್ತು ಕನಸುಗಾರ ವ್ಯಕ್ತಿತ್ವದ ಒಳನುಡಿಗಳ ಮೊರೆತವಿದೆ. ಭಾರತದಲ್ಲಿ ಮೈದೋರಿರುವ ಕೇಡಿನ ಅವತರಣಕ್ಕೆ  ತಳ ಮಾಸುವ ಮುನ್ನ ಮನದ ತಲ್ಲಣಗಳ ದಾಖಲೆಯಿದು. ನಮ್ಮ ಕಾಲದ ವಿಷಾದದ ಕವಿ ನೀವು. ಒಳತನ ಆವಾಹನೆಯ ಕವನಗಳನ್ನು ಓದುವಾಗ, ಅಲ್ಲಿ ಚೇತೋಹಾರಿಯಾದ ಟಾಗೂರರ ಗೀತಾಂಜಲಿಯ ರಚನೆಗಳು ನೆನಪಾದವು.

ಇಲ್ಲಿನ ಪುರಾಣದ ರೂಪಕಗಳು ನವೀನವಾಗಿವೆ. ನನಗೆ ನೀವು ಇಷ್ಟೊಂದು ಪೌರಾಣಿಕ ರೂಪಕಗಳನ್ನು ಬಳಸಿದ್ದು ಸೋಗವೆನಿಸಿತು. ಬಹಳಷ್ಟು ರೂಪಕಗಳು ರಪರಪ ಬರುವುದರಿಂದ, ಅವನ್ನು ಡಿಪೋಡ್ ಮಾಡಿಕೊಳ್ಳುವುದೇ ಒಂದು ಸವಾಲು. ಒಂದೇ ರೂಪಕ ಪ್ರತಿಮೆಯಾಗಿ ಇಡೀ ಕವಿತೆಯನ್ನು ಆವರಿಸಿಕೊಳ್ಳುವ ರಚನೆಗಳತ್ತ ಪ್ರಯೋಗ ಮಾಡಬಹುದು. ಬಹಳಷ್ಟು ಕಡೆ ಕಏತೆ ರೂಪಕವಾಗಿದೆ. ರೂಪಕಗಳೇ ಕಏತೆಗಳಾಗಿವೆ. ಇದು ನಿಮಗಿರುವ ರೂಪಕಗಳ ಬಗೆಗಿರುವ ಸಹಜ ಸೆಳೆತವೊ, ಈಗಿರುವ ಅವಸ್ಥೆಯಲ್ಲಿ ವಿಟವನ್ನು ಬಿಚ್ಚಿಹೇಳಲಾಗದ ಅಸಹಾಯಕತೆಯೇ ಗುಹ್ಯಶೈಅಯಾಗಿದೆಯೊ ಕಾಣಿ, ತುಸು ಅಲ್ಲಮನ ಆವಾಹನೆಯಾಗಿದೆ.

ರಹಮತ್ ತರೀಕೆರೆ

ನೆಲ್ಲುಕುಂಟೆ ವೆಂಕಟೇಶ್ ಕಾವ್ಯದಲ್ಲಿ, ಬಿಡದೆ ಬೆನ್ನಣ್ಣ ಬರುವ ಕಡಲ ತೆರೆಗಳಂತಹ ರೂಪಕಗಳು, ಪ್ರತಿಮೆಗಳು, ಕವಿಯ ಕಾಲಘಟ್ಟದ ತಳಮಳವನ್ನು ಲಯಗಾರಿಕೆಯ ಸಮೇತ ನಮಗೆ ತಲುಪಿಸುತ್ತವೆ. ವೆಂಕಟೇಶ್ ಹೊರತರುತ್ತಿರುವ ಮೊದಲ ಕೃತಿ ಇದು. ಪತ್ರಿಕೆಗಳಲ್ಲಿ ಬರೆದ ಬರವಣಿಗೆಗಳ ಲೆಕ್ಕದಲ್ಲಿ ಹೇಳಬೇಕೆಂದರೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪುಸ್ತಕ ಪ್ರಕಟಣೆಗೂ ಮೊದಲೇ ಬಹಳ ಭರವಸೆ ಮೂಡಿಸಿರುವ ಕಏ. ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಗೊಂಡ ಪ್ರತಿ ಕವನವನ್ನೂ ಓದಿ ಮೆಚ್ಚಿಕೊಂಡ ಕಾವ್ಯದ ಗಂಭೀರ ಓದುಗರು ಆಗಿಂದಾಗಲೇ ವ್ಯಕ್ತಪಡಿಸಿರುವ ಮೆಚ್ಚುಗೆ ವೆಂಕಟೇಶ್‌ ಅವರ ಗಾಢಾಭಿವ್ಯಕ್ತಿಗೊಂದು ಮಾನಪತ್ರ.

– ಬಂಜಗೆರೆ ಜಯಪ್ರಕಾಶ

ಗತದೆದುರು ವರ್ತಮಾನ, ವರ್ತಮಾನದೆದುರು ಗತಗಳನ್ನು ಎದುರಾಬದುರಾಗಿಟ್ಟು ರೂಪಕಗಳ ದಾಳ ಉರುಆಸುತ್ತಾ ಪ್ರಶ್ನೆಗಳ ಚದುರಂಗದ ಮೇಲೆ ಕಾವ್ಯ ಕಟ್ಟುತ್ತಿರುವ ಕವಿ ನೀವು. ಕನ್ನಡ ಕಾವ್ಯಕ್ಕೆ ಇನ್ನೂ ಜೀವವಿದೆ ಎಂಬುದರ ಸಾಕ್ಷಿ ಇಲ್ಲಿನ ಕವನಗಳು. ಈ ಕಾರ್ಯಕ್ರಮದಲ್ಲಿ ಸಾಷ್ಟಾರು ಹಿರಿಯ ಮತ್ತು ಹಿರಿಯ ಕವಿ ದಿಗ್ಗಜರುಗಳು ಭಾಗವಹಿಸಿ ಡಾ. ವೆಂಕಟೇಶಯ್ಯ  ಅವರಿಗೆ ಅಭಿನಂದನೆ ಸಲ್ಲಿಸಿದರು.

Интуиция_и_олимп_казино_скачать_помогут_рас     |     Analyse_détaillée_et_betify_casino_une_plateforme_de_jeux_en_ligne_innovante_p     |     Genuine_excitement_and_aviator_app_download_for_thrilling_wins_await_players_tod     |     Remarkable_artistry_defines_innovative_gameplay_with_royal_reels_and_exciting_ca     |     Strategic_gameplay_defines_the_chicken_road_game_and_demands_quick_reflexes_for     |     Potential_rewards_and_strategic_insights_surrounding_kwiff_betting_experiences_a     |     Искушение_азарта_и_Olimp_Casino_для_опытных_игрок     |     Реальные_выигрыши_и_олимп_казино_кз_твой_пу     |     Experience_boosted_odds_and_seamless_payouts_with_kwiff_betting_today     |     Niezwykła_strategia_i_Chicken_Road_game_dla_fanów_dynamicznych_wyzwań_na_drod     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें