ಪ್ರಾಮಾಣಿಕ ಅಧಿಕಾರಿ ಯೋಗೇಶ್ ಟಿ ವರ್ಗಾವಣೆ ಸರ್ಕಾರ ನಡೆ ಬಗ್ಗೆ ಆದಿವಾಸಿಗಳಿಂದ ಖಂಡನೆ

ದಕ್ಷ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತತೆಯಿಂದ ಸಮಾಜದ ಕಟ್ಟ ಕಡೆಯ ಮೂಲ ಆದಿವಾಸಿ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದ್ದ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ಮಾಡಿರುವುದು ಆದಿವಾಸಿ ಸಮುದಾಯಗಳಲ್ಲಿ ಆತಂಕ ಉಂಟು ಮಾಡಿದೆ.

  • ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಶ್ರೀ ಯೋಗೇಶ್ ಟಿ ಅವರನ್ನು ವರ್ಗಾವಣೆ ಮಾಡಿರುವ ಬಗ್ಗೆ ಕರ್ನಾಟಕ ರಾಜ್ಯದ ಕಾಡು ಕಾಡಂಚಿನ ಅರಣ್ಯ ಆಧಾರಿತ ಮೂಲ ಆದಿವಾಸಿಗಳು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಿವೆ. ಯೋಗೇಶ್ ಟಿ ಅವರು ಕೇವಲ ಒಂದುವರೆ ವರ್ಷದ ಹಿಂದೆ ಕರ್ನಾಟಕ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಬಂದು. ಪ್ರಸ್ತುತ ಆಧುನಿಕ ಜಗತ್ತಿನಲ್ಲೂ ಕೂಡ ಕಾಡು ಕಾಡಂಚಿನಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ. ಆದಿ ಮಾನವರಂತೆ ಬದುಕುತ್ತಿದ್ದ ಕಾಡು ಕಾಡಂಚಿನ ಅರಣ್ಯಾಧಾರಿತ ಆದಿವಾಸಿಗಳನ್ನು ಸಮಾಜದ ಮುನ್ನೆಲೆಗೆ ತಂದು ಅವರ ಪರವಾಗಿ ಸರ್ಕಾರ ಇದೆ ಎಂದು ತೋರಿಸಿಕೊಟ್ಟಂತಹ ದಕ್ಷ ಪ್ರಾಮಾಣಿಕ ಅಧಿಕಾರಿ. ಇವತ್ತು ಇಡೀ ರಾಜ್ಯ ಸರ್ಕಾರ ತನ್ನ ಆಯವ್ಯಯದಲ್ಲಿ ಹಾಗೂ ಯೋಜನೆಗಳಲ್ಲಿಯೂ ಕೂಡ ಸಮಾಜದಿಂದ ದೂರ ಉಳಿದು ಅಳಿವಿನಂಚಿನಲ್ಲಿರುವ ಆದಿವಾಸಿಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳುವುದರ ಮೂಲಕ. ಸರ್ಕಾರ ಮತ್ತು ಸಮುದಾಯಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರು ನಿರ್ದೇಶಕರಾಗಿ ಬಂದ ಮೇಲೆ ಆದಿವಾಸಿಗಳು ಸರ್ಕಾರದ ಮೇಲೆ ಭರವಸೆ ಮೂಡಿ ಸರ್ಕಾರಿ ಇಲಾಖೆಗಳ ಕಡೆ ಬರುತ್ತಿದ್ದು ಹೆಚ್ಚಾಗುತ್ತಿತ್ತು. ಆದರೆ ಇದನ್ನು ಸಹಿಸದ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಬಂಡವಾಳ ಶಾಹಿಗಳು ರಾಜಕೀಯ ಅಸ್ತ್ರವನ್ನು ಬಳಸಿಕೊಂಡು  ಯೋಗೇಶ್ ಅವರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡಿರುವುದು ಖಂಡನೀಯ. ಕೂಡಲೇ ಸರ್ಕಾರ ವರ್ಗಾವಣೆ ಆದೇಶವನ್ನು ಹಿಂಪಡೆದು  ಕನಿಷ್ಠ ಆರು ತಿಂಗಳಿಗಾದರೂ ಅವರನ್ನು ಮುಂದುವರಿಸುವಂತೆ ಕರ್ನಾಟಕ ರಾಜ್ಯಾದ್ಯಂತಿರುವ ಮೂಲಾದಿವಾಸಿಗಳು  ಸರ್ಕಾರವನ್ನು ಆಗ್ರಹಿಸಿದ್ದಾರೆ

ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ; ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಪುಷ್ಪ ವೈಭವ ಆರಂಭ     |     ಬರ್ತ್‌ಡೇ, ಪ್ರೀ-ವೆಡ್ಡಿಂಗ್ ಶೂಟ್‌ಗೆ ಈಗ ಬಾಡಿಗೆಗೆ ಸಿಗಲಿದೆ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್     |     ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್: A14 ಪ್ರದೋಷ್ ‘ಮಾಫಿ ಸಾಕ್ಷಿ’ ಅರ್ಜಿ ಸಲ್ಲಿಕೆ     |     ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ಹೊಸ ದಾಖಲೆ: ಭಾವನಾ ಕಾಂತ್‌ಗೆ ಪ್ರತಿಷ್ಠಿತ Fighter Combat Leader ಅರ್ಹತೆ     |     ‘ತೆಹೆಲ್ಕಾ’ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ     |     ನಾಗ್ಪುರದಲ್ಲಿ ವಿದ್ಯಾರ್ಥಿನಿ ಅಪಹರಣ-ಅತ್ಯಾಚಾರ; ಊಟದ ಆರ್ಡರ್ ಪೊಲೀಸರಿಗೆ ನೀಡಿತು ಮಹತ್ವದ ಸುಳಿವು     |     ಹಾರ್ಮುಜ್ ಜಲಸಂಧಿ ವಿವಾದ ತೀವ್ರ: ಅಮೆರಿಕ ಹೇಳಿಕೆಗೆ ಇರಾನ್ ತಿರುಗೇಟು – ‘ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವಿಲ್ಲ’     |     ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ: 5.25% ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ     |     ‘ಮೋದಿ ಪ್ರಧಾನಿ ಸ್ಥಾನ ತೊರೆದು ಇನ್‌ಫ್ಲುಯೆನ್ಸರ್ ಆಗಲಿ’ – ನೀಟ್ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಭಿಜೀತ್ ದೀಪ್ಕೆ ವಿವಾದಾತ್ಮಕ ಹೇಳಿಕೆ     |     ಆಗಸ್ಟ್‌ 3ಕ್ಕೆ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್–ವಿಜಯ್ ಭೇಟಿ? ವಿಧಾನಸೌಧದಲ್ಲಿ ಭರ್ಜರಿ ಸಿದ್ಧತೆ     |    

First Report Kannada
पत्रकार बंधु भारत के किसी भी क्षेत्र से जुड़ने के लिए सम्पर्क करें